BWSSB ಗುತ್ತಿಗೆ ಸಂಘದ ಸಾವಿರಾರು ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

ಬುಧವಾರ, 12 ಅಕ್ಟೋಬರ್ 2022 (14:13 IST)
ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೆ ತರಲು ಒತ್ತಾಯಿಸಿ ಬಿಡಬ್ಲ್ಯೂಎಸ್ ಎಸ್ ಬಿ ಕಾರ್ಮಿಕರು ಕಾರ್ಮಿಕ ಭವನದಲ್ಲಿ ಧರಣಿ ನಡೆಸುತ್ತಿದ್ದಾರೆ.
 
ತಮ್ಮ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು.STP ಮತ್ತು ಗ್ರಾಮಾಂತರ (ತೋರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿ )ವಲಯಗಳ ಕಾರ್ಮಿಕರಿಗೆ  ನವೋದಯ ಏಜೆನ್ಸಿಯಲ್ಲಿ ನೀಡುತ್ತಿರುವ ಸಂಬಳದಷ್ಟೇ ವೇತನ ಜಾರಿಮಾಡಬೇಕು.ಬೋನಸ್ ನೀಡಬೇಕು ಮತ್ತು ನಿವೃತ್ತಿಯಾದಾಗ ಗ್ರಾಚ್ಯುಟಿಯನ್ನು ಕಡ್ಡಾಯಗೊಳಿಸಬೇಕು.ಕೆಲಸದ ಅವಧಿ ,ವಾರದ ರಜೆ ,ಹಬ್ಬದ ರಜೆ 0T ಯನ್ನು ಜಾರಿಗೊಳಿಸಬೇಕು.ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕು.ಬಿ.ಬಿ.ಎಂ.ಪಿ ಮಾದರಿಯಲ್ಲಿ DPS ಪದ್ದತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ
 
ಈ 20 ರಂದು ಸಮಾನ ಕೆಲಸಕ್ಕೆ ವೇತನ ಜಾರಿಯ ಹಿಂದೆ ಏಪ್ರಿಲ್ 20 ರಂದು ಪ್ರತಿಭಟನೆ ನಡೆಸಲಾಯಿತು ತದನಂತರ ತಮ್ಮ ಘನ ಅಧ್ಯಕ್ಷತೆಯಲ್ಲಿ ಹಾಗೂ ಜಲಮಂಡಳಿ ಅಧಿಕಾರಿಗಳು ಸಮುಖದಲ್ಲೇ ಆದ ನಿರ್ಣಯಗಳಲ್ಲಿ ಡಿಎ ಒಂದನ್ನು ಬಿಟ್ಟರೆ ಇತರೇ ನಿರ್ಣಯಗಳನ್ನು ಜಾರಿಗೊಳಿಸಲು ಜಲಮಂಡಳಿ ಅಧಿಕಾರಿಗಳು ಸಮಾನವಾಗಿ ಕಾರ್ಯನಿರ್ವಹಿಸುತ್ತಿಲ್ಲ ಈ ದಿನ Bwssb ನೌಕರರ ನ್ಯಾಯೋಚಿತ ಸಮಾನವಾದ ಕೆಲಸಕ್ಕೆ ಅರ್ಜಿ ಸಲ್ಲಿಸಲಾಗಿದೆ ವೇತನವನ್ನು ಜಾರಿಗೊಳಿಸಲು ಒತ್ತಾಯಿಸಿ ಹೋರಾಟವನ್ನು ಮಾಡಬೇಕಾಗಿರುವುದರಿಂದ ನಮಗೆ ಸಮಾನ ವೇತನವನ್ನು ಜಾರಿಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ