ಕೋಲಾರದ ಡಿ.ಎ.ಆರ್ ಕಚೇರಿ ಎದುರು 60 ವರ್ಷ ಮೇಲ್ಪಟ್ಟ ರೌಡಿಶೀಟರ್ ಗಳ ಪೆರೇಡ್
ಕೋಲಾರ ಎಸ್ಪಿ ಡಿ ದೇವರಾಜ್, ಎ.ಎಸ್ಪಿ ಸಚಿನ್ ಘೋರ್ಪಡೆ ನೇತೃತ್ವದಲ್ಲಿ 60 ವರ್ಷ ಮೇಲ್ಪಟ್ಟ ರೌಡಿಶೀಟರ್ ಗಳ ಪೆರೇಡ್ ನಡೆಯುತ್ತಿದೆ.ವಯಸ್ಸಿನ ಆಧಾರ ಹಾಗೂ ಸನ್ನಡತೆ ಇರುವ ವ್ಯಕ್ತಿಗಳನ್ನ ರೌಡಿಶೀಟ್ ನಿಂದ ಮುಕ್ತಗೊಳಿಸುವ ಕಾರ್ಯವು ನಡೆಯುತ್ತಿದೆ.ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣೆಗಳ 50 ಕ್ಕು ಹೆಚ್ಚು ರೌಡಿಶೀಟರ್ ಗಳು ಪೆರೇಡ್ ನಲ್ಲಿ ಭಾಗಿಯಾಗಿದ್ದು,ಪ್ರತಿಯೊಬ್ಬ ರೌಡಿಗಳ ಅಪರಾಧ ಮಾಹಿತಿಯನ್ನ ಎಸ್ಪಿ ದೇವರಾಜ್ ಕಲೆಹಾಕುತ್ತಿದ್ದಾರೆ.