ಜನವರಿ 18ಕ್ಕೆ ಗುತ್ತಿಗೆದರರ ಬೃಹತ್ ಪ್ರತಿಭಟನೆ

ಸೋಮವಾರ, 16 ಜನವರಿ 2023 (19:04 IST)
ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಸಂಚಲನಕಾರಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.ರಾಜ್ಯದಲ್ಲಿ ಇತ್ತಿಚೆಗೆ ಗುತ್ತಿಗೆದಾರರು ಸರ್ಕಾರದ ಮೇಲೆ ಸಾಕಷ್ಟು ಆರೋಪಗಳನ್ನ ಮಾಡ್ತಿದ್ದಾರೆ. ಈ ಹಿಂದೆ ಮಾಡಿದ 2500‌ಕೋಟಿ ಕಾಮಗಾರಿ ಬಿಲ್ ಬಾಕಿ ಇದೆ.  ಈ ಸದ್ಯವಿರುವ ಕಾಮಗಾರಿ ಮುಂದಿನ ಕಾಮಗಾರಿಯ ಅಂದಾಜು ಪಟ್ಟಿ ಮಾಡಿ ಮುಂಬುರುವ ಬಜೆಟ್ ನಲ್ಲಿ ಅನುದಾನ ನಿಗದಿ ಪಡಿಸುತ್ತೆ ಮತ್ತು ಅದರ ಜೊತೆಗೆ ಸರ್ಕಾರಕ್ಕೆ  ೬ ಬೇಡಿಕೆಗಳನ್ನು ಈಡೇರಿಸುವಂತೆ ಗುತ್ತಿಗೆದಾರ ಸಂಘಟನೆಯಿಂದ ಇದೇ ೧೮ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ೨೦ ಸಾವಿರ ಅಧಿಕ ಗುತ್ತಿಗೆದಾರ ಸೇರಿಸಿ ಪ್ರತಿಭಟನೆ ಮಾಡ್ತಿದ್ದಾರೆ.
ಈಗಾಗಲೇ ಗುತ್ತಿಗೆದಾರ ಸಂಘಟನೆಯ ಅಧ್ಯಕ್ಷರಾದ ಕೆಂಪಣ್ಣ ಸಾಕಷ್ಟು ರಾಜಕೀಯ ನಾಯಕರ ಮೇಲೆ ಕಮಿಷನ್ ಆರೋಪ ಮಾಡ್ತಾನೆ ಬಂದಿದ್ದಾರೆ.. ಇದೀಗ ಅದೇ ಗುತ್ತೆಗೆದಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಆರ್ ಮಂಜುನಾಥ, ಬಿಜೆಪಿ ಮತ್ತೊರ್ವ ಶಾಸಕರ ಮೇಲೆ  ಮತ್ತೆದೇ ಆರೋಪ ಮಾಡಿದ್ದಾರೆ. ಚಿತ್ರದುರ್ದ ಶಾಸಕ ತಿಪ್ಪಾರೆಡ್ಡಿ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆದ್ರೂ ಅವರಿಗೆ ಕಮಿಷನ್ ಕೊಡ್ಲೇಬೇಕು.. ಅದಕ್ಕೆ ಸಂಬಂಧಿಸಿದಂತೆ ಒಂದು ಆಡಿಯೋ ಕೂಡಾ ಬಿಡುಗಡೆ ಮಾಡಿದ್ದಾರೆ.
ಇನ್ನು ೨೦೧೯ ರಿಂದ ಅವರ ಕ್ಷೇತ್ರದಲ್ಲಿ ನಾನು  ಕಾಮಗಾರಿ ಮಾಡಿದೇನೆ. ಮೂರು ವರ್ಷದಲ್ಲಿ ೯೦ ಲಕ್ಷ ಕಮಿಷನ್ ಶಾಸಕ ತಿಪ್ಪಾರೆಡ್ಡಿ ನೀಡಿದೇನೆ.. ಅದರಲ್ಲಿ ಚಿತ್ರದುರ್ಗ ಆಸ್ಪತ್ರೆ ಕಾಮಗಾರಿಗೆ ೨೦ ಲಕ್ಷ ಕಮಿಷನ್ ನೀಡಿದೇನೆ, Pwd ಬಿಲ್ಡಿಂಗ್ ರಿಪೇರಿ ಕಾಮಗಾರಿಯಲ್ಲಿ ೧೨.೫೦ ಲಕ್ಷ ಕಮಿಷನ್ ನೀಡಿದೇನೆ, ಕೋವಿಡ್ ಮೊದಲನೇಯ ಸಮಯದಲ್ಲಿ ೧೦ ಲಕ್ಷ ಕಮಿಷನ್ ನೀಡಿದೇನೆ, ಕೋವಿಡ್ ಎರಡನೇಯ ಸಮಯದಲ್ಲಿ ೧೨ ಲಕ್ಷ ಕಮಿಷನ್ ನೀಡಿದೇನೆ, ಮೆಡಿಕಲ್ ಗ್ಯಾಸ್ ರೂಂ ಕಾಮಗಾರಿ ೪ ಲಕ್ಷ ಕಮಿಷನ್ ನೀಡಿದೇನೆ,ಲೇಔಟ್ ನಿರ್ಮಾಣ ಕಾಮಗಾರಿಗೆ ೪ ಲಕ್ಷ ಕಮಿಷನ್ ನೀಡಿದೇನೆ ,ಲೇಔಟ್ ಅನುಮೋದನೆ ಗೆ ೧೮ ಲಕ್ಷ ಕಮಿಷನ್ ನೀಡಿದೇನೆ, ಇದಿಷ್ಟು ಮೂರು ವರ್ಷಗಳಿಂದ ಶಾಸಕ  ತಿಪ್ಪಾರೆಡ್ಡಿಯವರಿಗೆ ಕಮಿಷನ್ ನೀಡಿರೋದು ಎಂದು ಮಂಜುನಾಥ ಆರೋಪ ಮಾಡಿದ್ದಾರೆ.ಈ ಸದ್ಯ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಿದ್ದು ತನಿಖೆ ಬಳಿಕ ಗುತ್ತೆದಾರ ಮಂಜುನಾಥ ಆರೋಪ ಮಾಡ್ತಿರೋದು ಎಷ್ಟರ ಮಟ್ಟಿಗೆ ನಿಜಾ ಇದೆ ಅನ್ನೋದು ತಿಳಿದು ಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ