ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕುಡುಕರ ಕಿರಿಕ್..!

ಸೋಮವಾರ, 16 ಜನವರಿ 2023 (15:16 IST)
ಸಿದ್ದರಾಮಯ್ಯ ಭಾಷಣ ವೇಳೆ ಕುಡುಕನೊರ್ವ ವೇದಿಕೆ ಬಂದು ನಿಂತುಬಿಟ್ಟ.ಅವನ್ನ ಮೊದಲು ಕಳಸ್ರಿ ಎಂದು ಸಿದ್ದರಾಮಯ್ಯ ಗದರಿದಾರೆ. 
 
ಹೇ ಪೊಲೀಸ್ ಅವರನ್ನ ಕಳುಹಿಸಿ ಆ ಕಡೆ.ಇಂಥವರು ಇರ್ತಾರೆ ಇದಕ್ಕೆ ತಲೆಕಡಸಿಕೊಳ್ಳಬೇಡಿ.ಕೆಲವುರು ಕುಡಿದು ಬಂದಿರ್ತಾರೆ ಇನ್ನೂ ಕೆಲವರಿಗೆ ಕುಡಿಸಿ ಕಳಸ್ತಿರಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.
 
ಇನ್ನೂ ಹೆಚ್ ಎಂ ರೆವಣ್ಣ ಭಾಷಣ ಮಾಡುವ ವೇಳೆಯೂ ಕುಡಕನ ಕಿರಿಕ್ ಇತ್ತು.ಇದೀಗ ಸಿದ್ದರಾಮಯ್ಯ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನ ನೀಡಿದ್ದಾರೆ ಎಂದು ಭಾಷಣ ಮಾಡುತ್ತಿರುವಾಗ ಏನ್ ಸಹಾಯ ಮಾಡಿದ್ದಾರೆ ಎಂದು ಕುಡುಕ ಪ್ರಶ್ನೆ ಮಾಡಿದಾನೆ.ಆ ಕುಡುಕನ ಪ್ರಶ್ನೆಗೆ  ಆಗ ರೇವಣ್ಣ ಗರಂ ಆಗಿದ್ರು.ಬಳಿಕ ಆ ಕುಡುಕನನ್ನೂ ಪೊಲೀಸರು ವೇದಿಕೆ ಬಳಿಯಿಂದ ಹೊರಗಡೆ ಕರೆದೊಯ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ