ಡಾಕ್ಟರಾಗೋದು ಇನ್ನು ಮತ್ತಷ್ಟು ದುಬಾರಿ

ಗುರುವಾರ, 29 ಜೂನ್ 2017 (09:06 IST)
ಬೆಂಗಳೂರು: ಖಾಸಗಿ ಕಾಲೇಜುಗಳ ಒತ್ತಡಕ್ಕೆ ಮಣಿದ ಸರ್ಕಾರ ಪ್ರಸಕ್ತ ಸಾಲಿನಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಶೇ. 10 ರಷ್ಟು ಹೆಚ್ಚಿಸಿದೆ.

 
ಇದರೊಂದಿಗೆ ವೈದ್ಯ ಸೀಟುಗಳು ಮತ್ತಷ್ಟು ದುಬಾರಿಯಾಗಲಿದೆ. ಬುಧವಾರ ಖಾಸಗಿ ವೈದ್ಯಕೀಯ ಶಾಲೆಗಳ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನೂ ಮೂರು ವರ್ಷಗಳ ಅವಧಿಗೆ ಶೇ. 10 ರಷ್ಟು ಶುಲ್ಕ ಹೆಚ್ಚಳವಾಗಲಿದೆ.

ಪ್ರಸಕ್ತ ಸರ್ಕಾರಿ ಸೀಟಿಗೆ 70,000 ರೂ. ಮತ್ತು ಖಾಸಗಿ ಶುಲ್ಕ 5,85,000 ರೂ. ಇದೆ. ಪ್ರಸಕ್ತ ವರ್ಷದಿಂದ ಇದು ಸರ್ಕಾರಿ ಶುಲ್ಕ 77,000 ರೂ. ಮತ್ತು ಖಾಸಗಿ ಶುಲ್ಕ 6,35,000 ರೂ. ಆಗಲಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಶುಲ್ಕ ಕಡಿಮೆ. ಹಾಗಿದ್ದರೂ, ಕಾಲೇಜು ನಡೆಸಲು ಕಷ್ಟವಾಗುತ್ತಿರುವುದರಿಂದ ಶುಲ್ಕ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಖಾಸಗಿ ಆಡಳಿತ ಮಂಡಳಿ ಮನವಿ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ