ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ವಿಸ್ತರಣೆ

ಗುರುವಾರ, 9 ಏಪ್ರಿಲ್ 2020 (06:43 IST)
ಲಕ್ನೋ : ಕೊರೊನಾ ಭೀತಿ ಹಿನ್ನಲೆ ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ.


ಲಕ್ನೋ, ನೋಯ್ಡಾ, ಆಗ್ರಾ, ವಾರಣಾಸಿ, ಗಾಜಿಯಾಬಾದ್, ಮೀರತ್, ಗೌತಂಬುದ್ ನಗರ, ಕಾನ್ಪುರ, ಶಾಮ್ಲಿ, ಬರೇಲಿ, ಬುಲಂದ್ ಶಹರ್, ಫಿರೋಜಾಬಾದ್, ಮಹಾರಾಜಗಂಜ್, ಸೀತಾಪುರ, ಸಹರಾನ್ ಪುರ ಹಾಗೂ ಬಸ್ತಿ ಜಿಲ್ಲೆಗಳಲ್ಲಿ ಹೆಚ್ಚಿನ ಕೊರೊನಾ ಸೋಂಕಿತರು ಪತ್ತೆಯಾದ ಕಾರಣ ಈ 15 ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಉತ್ತರ ಪ್ರದೇಶದ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್.ಕೆ.ತಿವಾರಿ ತಿಳಿಸಿದ್ದಾರೆ.


ಅಲ್ಲಿ ಕೇವಲ ವೈದ್ಯಕೀಯ ಹಾಗೂ ಹೋಮ್ ಡೆಲಿವರಿ ಸಿಬ್ಬಂದಿಗೆ ಮಾತ್ರ ಹೊರಗೆ ಬರಲು ಅವಕಾಶವಿದೆ. ಯಾರಿಗೂ ಮನೆಯಿಂದ ಹೊರಹೋಗಲು ಅನುಮತಿ ಇಲ್ಲ. ಎಲ್ಲಾ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆ ರಾಜ್ಯ ಸರ್ಕಾರ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ