ಸುವರ್ಣ ಸೌಧಕ್ಕೆ ಸ್ಥಳಾಂತರಕ್ಕೂ ಮುನ್ನವೇ ಸಕ್ಕರೆ ನಿರ್ದೇಶನಾಲಯ ವಿಲೀನ; ಉ.ಕ. ರೈತರು ಕಿಡಿ

ಸೋಮವಾರ, 22 ಜೂನ್ 2020 (10:17 IST)
Normal 0 false false false EN-US X-NONE X-NONE

ಬೆಂಗಳೂರು : ಸುವರ್ಣ ಸೌಧಕ್ಕೆ ಸ್ಥಳಾಂತರಕ್ಕೂ ಮುನ್ನವೇ ಸಕ್ಕರೆ ನಿರ್ದೇಶನಾಲಯ ವಿಲೀನ ಪ್ರಸ್ತಾವನೆಗೆ ಉತ್ತರ ಕರ್ನಾಟಕ ರೈತರು ಕಿಡಿಕಾರಿದ್ದಾರೆ.
 


ಸಚಿವ ಶಿವರಾಂ ಹೆಬ್ಬಾರ್ ಕೈಗಾರಿಕಾ ಇಲಾಖೆಯಲ್ಲಿ ಸಕ್ಕರೆ ನಿರ್ದೇಶನಾಲಯ  ವಿಲೀನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಣಕಾಸು ಇಲಾಖೆಗೆ ಪತ್ರ ಸಲ್ಲಿಸಿದ್ದಾಗಿ ಸಚಿವರ ಪತ್ರ ಬರೆದಿದ್ದು, ಸಚಿವ ಸಂಪುಟ ಉಪ ಸಮಿತಿ ಪ್ರಸ್ತಾವನೆ ಪರಿಶೀಲಿಸಿದೆ. ಆದರೆ  ಸಚಿವ ಶಿವರಾಂ ಹೆಬ್ಬಾರ್ ನಿರ್ಧಾರಕ್ಕೆ ಉತ್ತರ ಕರ್ನಾಟಕ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ನಿರ್ದೇಶನಾಲಯ ಸ್ಥಳಾಂತರದಿಂದ ಅನುಕೂಲವಾಗುತ್ತೆ, ಸುವರ್ಣಸೌಧಕ್ಕೆ ಸ್ಥಳಾಂತರದಿಂದ ಉಪಯೋಗವಾಗುತ್ತೆ. ಕಬ್ಬಿನ ಬಾಕಿ, ಬೆಳೆಗಾರರ ಸಮಸ್ಯೆ ಬಗೆಹರಿಯುವ ಬಗ್ಗೆ ಉತ್ತರ ಕರ್ನಾಟಕ ಭಾಗದ ರೈತರು ವಿಶ್ವಾಸವಿಟ್ಟುಕೊಂಡಿದ್ರು. ಈಗ ವಿಲೀನ ಮಾಡಲು ಪ್ರಸ್ತಾವನೆ ಹಿನ್ನಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ