ನೆನ್ನೆ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಮಂದಿ ತತ್ತರ: ನಗರದಲ್ಲಿ ಇನ್ನೂ 2 3 ದಿನ ಹೆಚ್ಚಿನ ಮಳೆ ಎಂದ ಹವಾಮಾನ ಇಲಾಖೆ

ಮಂಗಳವಾರ, 21 ಸೆಪ್ಟಂಬರ್ 2021 (20:40 IST)
ಬೆಂಗಳೂರು: ಕಳೆದ 3 4 ದಿನದಿಂದ ಬಿಸಿಲ ಧಗೆಯಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿಗೆ ಮಂಗಳವಾರ ವರುಣ ತಂಪೆರೆದಿದ್ದಾನೆ. ನೆನ್ನೆ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಮಂದಿ ತತ್ತರಿಸಿಹೋಗಿದ್ದರು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಿದ್ದು, ನಗರದಲ್ಲಿ ಇಂದೊ ಸೇರಿದಂತೆ ಇನ್ನೂ 2 3 ದಿನ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
 
ಕಳೆದ 3 4 ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಧಗೆಯ ವಾತಾವರಣಕ್ಕೆ ಜನ ಬೇಸತ್ತು ಹೋಗಿದ್ದರು. ಬಿರು ಬಿಸಿಲಿಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದರು. ನೆನ್ನೆ ಮಧ್ಯಾಹ್ನ ಸುರಿದ ಭಾರೀ ಮಳೆ ಸಿಲಿಕಾನ್ ಸಿಟಿ ಜನರನ್ನ ಫುಲ್ ಕೂಲ್ ಕೂಲ್ ಮಾಡಿತ್ತು. ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಯಶವಂತಪುರ, ಕೆ.ಆರ್ ಸರ್ಕಲ್, ಹೆಬ್ಬಾಳ, ಮಲ್ಲೇಶ್ವರಂ, ಪ್ಯಾಲೇಸ್ ರೋಡ್ ಸೇರಿದಂತೆ ನಗರದಾದ್ಯಂತ ಭಾರಿ ಮಳೆ ಸುರಿದಿತ್ತು. ಕೆಲವೊಂದಷ್ಟು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿತ್ತು.
 
ಪ್ಯಾಲೇಸ್ ರೋಡ್, ಹೆಬ್ಬಾಳ, ಶಿವಾನಂದ ಸರ್ಕಲ್ ಅಂಡರ್ ಪಾಸ್ ಗಳಲ್ಲಿ 4-5 ಅಡಿಗಳಷ್ಟು ನೀರು ನಿಂತಿದ್ದು ಕಂಡುಬಂದಿತ್ತು . ರಸ್ತೆಗಳು ಕೆರೆಗಳಂತೆ ಭಾಸವಾದವು ವಾಹನ ಸವಾರರು ರಸ್ತೆಗಳಲ್ಲಿ ಪರದಾಡಿದರು. ಇನ್ನು ಕೆಲವೆಡೆ ರಸ್ತೆಗಳ ಮಧ್ಯದಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
 
ಮೆಜೆಸ್ಟಿಕ್, ಮಲ್ಲೇಶ್ವರಂ, ಕೆ.ಆರ್ ಮಾರ್ಕೆಟ್, ಶಿವಾಜಿನಗರ, ಆನಂದರಾವ್ ಸರ್ಕಲ್ ಸೇರಿದಂತೆ ವಾಹನ ದಟ್ಟಣೆ ಇರುವ ಏರಿಯಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ