ನಮ್ಮ ಮೆಟ್ರೋ ಪ್ರಯಾಣ ದರ ಏರಿಸಲು ನಿರ್ಧಾರ

ಶನಿವಾರ, 17 ಜೂನ್ 2017 (19:38 IST)
ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಂಡಿರುವ ಸಂತಸದ ನಡುವೆ ಬಿಎಂ ಆರ್ ಸಿ ಎಲ್ ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಶಾಕ್ ನೀಡಿದೆ. ಮೆಟ್ರೋ ಪ್ರಯಾಣ ದರದಲ್ಲಿ ಶೇ.10ರಿಂದ ಶೇ.12ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
 
2011ರ ನಂತರ ಮೆಟ್ರೋ ಪ್ರಯಾಣ ದರ ಏರಿಕೆಯಾಗಿಲ್ಲ. ಈ ಅವಧಿಯಲ್ಲಿ ಕಾರ್ಯಾಚರಣೆ ವೆಚ್ಚದಲ್ಲಿ ಭಾರಿ ಹೆಚ್ಚಳ ಆಗಿದೆ. ರಾಜ್ಯ ಸರ್ಕಾರ ವರ್ಷಕ್ಕೆ ರು.276 ಕೋಟಿಯಷ್ಟು ನಷ್ಟವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರಯಾಣದರ ಹೆಚ್ಚಳ  ಅನಿವಾರ್ಯ ಎಂದು ಬಿಎಂಆರ್ ಸಿ ಎಲ್  ಮೂಲಗಳು ತಿಳಿಸಿವೆ. 
 
ಮೆಟ್ರೋ ಪ್ರಯಾಣ ದರ ಈಗಾಗಲೇ ಇರುವ ಕನಿಷ್ಠ 10 ರೂ. ಹಾಗೂ 40 ರೂ.ವರೆಗೆ ಪ್ರಯಾಣ ದರ ಇತ್ತು. ಹಾಗಾಗಿ ಇನ್ನು ಶೇ.10ರಷ್ಟು ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿರುವುದಾಗಿ ಬಿಎಂಆರ್ ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ