ಪಾಟ್ನಾ ಆಸ್ಪತ್ರೆಯೊಳಗೆ ನುಗ್ಗಿ ಕೊಲೆ ಆರೋಪಿಯ ಬರ್ಬರ ಹತ್ಯೆ: ಐವರು ಕೋಲ್ಕತ್ತಾದಲ್ಲಿ ಅರೆಸ್ಟ್‌

Sampriya

ಶನಿವಾರ, 19 ಜುಲೈ 2025 (17:49 IST)
ನವದೆಹಲಿ: ಪಾಟ್ನಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊಲೆ ಆರೋಪಿ ಚಂದನ್ ಮಿಶ್ರಾ ಕೊಂದ ಪ್ರಕರಣ ಸಂಬಂಧ ಐವರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

ಕೋಲ್ಕತ್ತಾ ಸಮೀಪದ ಸ್ಯಾಟಲೈಟ್ ಟೌನ್‌ಶಿಪ್ ನ್ಯೂ ಟೌನ್‌ನಲ್ಲಿರುವ ವಸತಿ ಸಮುಚ್ಚಯದಲ್ಲಿ ಮುಂಜಾನೆ ಬಂಧಿಸಲಾಗಿದೆ. ಪಾಟ್ನಾ ಪೊಲೀಸರು ಮತ್ತು ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿತು.

ಬಿಹಾರದ ಬಕ್ಸರ್ ಜಿಲ್ಲೆಯ ಆರೋಪಿ ಮಿಶ್ರಾ, ಗುರುವಾರ ಬೆಳಗ್ಗೆ ಪಾಟ್ನಾದ ಆಸ್ಪತ್ರೆಯ ವಾರ್ಡ್‌ನಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ವಾರ್ಡ್‌ಗೆ ನುಗ್ಗಿದ ಐವರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ