ಮೈತ್ರಿ ಸರ್ಕಾರವನ್ನು Coja ಸರ್ಕಾರ ಎಂದು ಟೀಕಿಸಿದ ಸಚಿವ ಅನಂತ್ ಕುಮಾರ್ ಹೆಗಡೆ

ಗುರುವಾರ, 7 ಫೆಬ್ರವರಿ 2019 (15:42 IST)
ಮೈಸೂರು : ಯಾವಾಗಲೂ ವಿವಾದಗಳ ಮೂಲಕವೇ ಸುದ್ಧಿಯಾಗುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು Coja ಸರ್ಕಾರ ಎಂದು ಟೀಕಿಸಿದ್ದಾರೆ.


ಕೇಂದ್ರ ಸರ್ಕಾರದ ಬಜೆಟ್ ಕುರಿತು ಟ್ವೀಟ್ ಮಾಡಿರುವ ಅನಂತ್ ಕುಮಾರ್ ಹೆಗ್ಡೆ ಬಜೆಟ್ ನಲ್ಲಿ ರೈತರಿಗೆ ಘೋಷಣೆ ಮಾಡಿದ ವಿಶೇಷ ಯೋಜನೆಗಳು ಕೂಡಲೇ ಜಾರಿಯಾಗುವಂತೆ ಸೂಚಿಸಿರುವ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಕಿಡಿಕಾರಿದ ಅವರು, ‘ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಹೇಳಿ ಅಧಿಕಾರ ಕಬಳಿಸಿದ coja ಸರ್ಕಾರಕ್ಕೆ 8 ತಿಂಗಳಾದರೂ ರೈತರ ಆತ್ಮಹತ್ಯೆ ತಡೆಯಲಾಗುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಟೀಕಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ