ಕರ್ನಾಟಕದ ಹೋಟೆಲ್ ಗಳಲ್ಲಿ ಇನ್ನು ಪ್ಲಾಸ್ಟಿಕ್ ನಿಷೇಧ: ಸಚಿವ ದಿನೇಶ್ ಗುಂಡೂರಾವ್ ಆದೇಶ

Krishnaveni K

ಗುರುವಾರ, 27 ಫೆಬ್ರವರಿ 2025 (13:19 IST)
ಬೆಂಗಳೂರು: ರಾಜ್ಯ ರಾಜಧಾನಿಯ ಕೆಲವು ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ನಲ್ಲಿ ಆಹಾರ ತಯಾರಿಸಿ ಕೊಡುವುದರಿಂದ ಕ್ಯಾನ್ಸರ್ ನಂತಹ ಮಹಾಮಾರಿ ಬರುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಹಲವು ಹೋಟೆಲ್, ಉಪಾಹಾರ ಮಂದಿರಗಳ ಆಹಾರ ಸ್ಯಾಂಪಲ್ ಗಳ ಗುಣಮಟ್ಟವನ್ನು ಆರೋಗ್ಯ ಇಲಾಖೆ ಪರೀಕ್ಷೆಗೊಳಪಡಿಸಿತ್ತು. ಹಲವೆಡ ಇಡ್ಲಿ ತಯಾರಿಸಲು ಬಟ್ಟೆ ಬದಲು ಹಾನಿಕಾರಕ ಪ್ಲಾಸ್ಟಿಕ್ ಬಳಸಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವರು ಈ ಆದೇಶ ನೀಡಿದ್ದಾರೆ.

ಇನ್ನು ಮುಂದೆ ಹೋಟೆಲ್, ಉಪಾಹಾರ ಮಂದಿರಗಳಲ್ಲಿ ಆಹಾರ ತಯಾರಿಕೆಗೆ ಮತ್ತು ಪಾರ್ಸೆಲ್ ಕಟ್ಟಲು ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ. ಈಗಾಗಲೇ ಪರೀಕ್ಷೆ ನಡೆಸಿರುವ ಇಡ್ಲಿ ಸ್ಯಾಂಪಲ್ ಗಳಲ್ಲಿ ಕಾರ್ಸಿನೋಜಿಕ್ ಅಂಶ ಪತ್ತೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಾರ್ಸಿನೋಜಿಕ್ ಅಂಶ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಇನ್ನು ಮುಂದೆ ಪ್ಲಾಸ್ಟಿಕ್ ಕವರ್ ಗಳಲ್ಲಿ ಆಹಾರ ತಯಾರಿ, ವಿತರಣೆ ಮಾಡಿದರೆ ದಂಡ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ