ಹೀರೇಮಗಳೂರು ಕಣ್ಣನ್ ವೇತನ ವಾಪಸ್ ನೋಟಿಸ್ ಹಿಂಪಡೆಯಲು ಸೂಚಿಸಿದ ಸಚಿವರು

Krishnaveni K

ಬುಧವಾರ, 24 ಜನವರಿ 2024 (09:45 IST)
ಬೆಂಗಳೂರು: ಕನ್ನಡದ ಪೂಜಾರಿ ಖ್ಯಾತಿಯ ಹೀರೇಮಗಳೂರು ಕಣ್ಣನ್ ವೇತನ ವಾಪಸಾತಿಗೆ ನೋಟಿಸ್ ನೀಡಿದ್ದ ಸರ್ಕಾರ ಈಗ ತಾನೇ ಮುಜುಗರಕ್ಕೊಳಗಾಗಿದೆ.

ಚಿಕ್ಕಮಗಳೂರಿನ ಕೋದಂಡ ರಾಮನ ದೇವಾಲಯದಲ್ಲಿ ಕನ್ನಡದಲ್ಲಿ ಮಂತ್ರ ಹೇಳಿ ರಾಮನಿಗೆ ಪೂಜೆ ಸಲ್ಲಿಸುವ ಅರ್ಚಕ ಹೀರೇಮಗಳೂರು ಕಣ್ಣನ್ ಗೆ ಜಿಲ್ಲಾಡಳಿತ ದೇವಾಲಯದಲ್ಲಿ ಆದಾಯ ಕಡಿಮೆ ಎಂಬ ನೆಪವೊಡ್ಡಿ ತಿಂಗಳಿಗೆ 4,500 ರೂ.ಗಳಂತೆ 10 ವರ್ಷದ ವೇತನವನ್ನು ವಾಪಸ್ ಮಾಡುವಂತೆ ನೋಟಿಸ್ ನೀಡಿತ್ತು.

ಇದು ಬಿಜೆಪಿ ಸೇರಿದಂತೆ ಜನರ ತೀವ್ರ ಟೀಕೆಗೆ ಗುರಿಯಾಗಿತ್ತು. ಬಿಜೆಪಿಯಂತೂ ರಾಮಮಂದಿರ ನಿರ್ಮಾಣದ ಸಿಟ್ಟನ್ನು ಕಾಂಗ್ರೆಸ್ ಈ ರೀತಿ ತೀರಿಸಿಕೊಳ್ಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತು.

ಈ ಆದೇಶ ಸರ್ಕಾರಕ್ಕೇ ಮಜುಗರ ತಂದಿರುವ ಹಿನ್ನಲೆಯಲ್ಲಿ ಮಧ‍್ಯಪ್ರವೇಶಿಸಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಹಶೀಲ್ದಾರ್ ತಪ್ಪಿನಿಂದ ಈ ರೀತಿ ಆಗಿದೆ. ನೋಟಿಸ್ ವಾಪಸ್ ಪಡೆಯಲು ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ