ನಾನೂ ಡಿನ್ನರ್ ಮೀಟಿಂಗ್ ಕರೀತೀನಿ, ನಂದೂ ಒಂದು ಇರ್ಲಿ ಎಂದ ಸಚಿವ ಈಶ್ವರ್ ಖಂಡ್ರೆ

Krishnaveni K

ಮಂಗಳವಾರ, 7 ಜನವರಿ 2025 (13:51 IST)
ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್ ವಿವಾದ ಸುದ್ದಿಯಾಗಿರುವ ಬೆನ್ನಲ್ಲೇ ಇತ್ತ ಸಚಿವ ಈಶ್ವರ್ ಖಂಡ್ರೆ ನಂದೂ ಒಂದು ಇರ್ಲಿ ಅಂತ ನಾನೂ ಡಿನ್ನರ್ ಮೀಟ್ ಮಾಡ್ತೀನಿ ಎಂದಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ಸಿದ್ದರಾಮಯ್ಯ ತಮ್ಮ ಆಪ್ತ ಬಳಗದವರೊಂದಿಗೆ ಡಿನ್ನರ್ ಮೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಡಿಕೆ ಶಿವಕುಮಾರ್ ವಿದೇಶಕ್ಕೆ ಹೋಗಿರುವಾಗ ಈ ಮೀಟಿಂಗ್ ಮಾಡಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳೂ ಆರಂಭವಾಗಿತ್ತು. ಹೀಗಾಗಿ ಈಗ ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟ್ ಎಂಬ ಶಬ್ಧ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಇಂದು ಮಾಧ್ಯಮಗಳು ಸಚಿವ ಈಶ್ವರ ಖಂಡ್ರೆಯವರನ್ನು ಪ್ರಶ್ನೆ ಮಾಡಿದ್ದಾರೆ.

ಈಶ್ವರ ಖಂಡ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಾನೂ ಡಿನ್ನರ್ ಮೀಟ್ ಗೆ ಕರೆಯುತ್ತಿರುತ್ತೇನೆ. ಖಷಿಯಿಂದ ಡಿನ್ನರ್ ಮೀಟ್ ಗೆ ಕರೆದು ಒಟ್ಟು ಸೇರ್ತೀವಿ. ಅದರಲ್ಲೇನಿದೆ? ನಾನೂ ಸಚಿವರನ್ನು ಕರೀತಿನಿ, ಶಾಸಕರನ್ನು ಕರೀತಿನಿ, ನನ್ನ ಆಪ್ತ ಬಳಗದವರನ್ನು ಕರೀತಿನಿ ಅದರಲ್ಲಿ ತಪ್ಪೇನಿದೆ? ಈಗ ಹೊಸ ವರ್ಷವಿದೆ ಏನೋ ಖುಷಿಯಲ್ಲಿ ಡಿನ್ನರ್ ಮೀಟ್ ಮಾಡಿರಬಹುದಪ್ಪ’ ಎಂದು ಸಮಜಾಯಿಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ