ವಾಲ್ಮೀಕಿ ರಾಮ ಬೇರೆ, ಅಯೋಧ್ಯೆಯಲ್ಲಿರುವ ರಾಮನೇ ಬೇರೆ: ಸಚಿವ ಮಹದೇವಪ್ಪ ವಿವಾದ

Krishnaveni K

ಸೋಮವಾರ, 10 ಫೆಬ್ರವರಿ 2025 (10:58 IST)
ದಾವಣಗೆರೆ: ವಾಲ್ಮೀಕಿ ರಾಮ ಬೇರೆ, ಅಯೋಧ್ಯೆಯಲ್ಲಿರುವ ರಾಮನೇ ಬೇರೆ ಎಂದು ಸಚಿವ ಮಹದೇವಪ್ಪ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ ಪರಿಕಲ್ಪನೆಯ ರಾಮನೇ ಬೇರೆ, ಅಯೋಧ್ಯೆಯಲ್ಲಿರುವ ರಾಮನೇ ಬೇರೆ. ರಾಮನಿಂದ ವಾಲ್ಮೀಕಿಯೋ, ವಾಲ್ಮೀಕಿಯಿಂದ ರಾಮನೋ ಎಂದು ಚರ್ಚೆಯಾಗಬೇಕಿದೆ ಎಂದಿದ್ದಾರೆ.

ಅವರ ಈ ಹೇಳಿಕೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಎಚ್ ಸಿ ಮಹದೇವಪ್ಪ ಕೆಲವು ಸಮಯದ ಹಿಂದೆ ನನಗೆ ಈಗಿನ ಹಿಂದೂ ಧರ್ಮದ ಆಚರಣೆಗಳಲ್ಲಿ ನಂಬಿಕೆಯಿಲ್ಲ ಎಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ರಾಮನ ಬಗ್ಗೆ ಕೆದಕಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವಾದಾಗ ಇಡೀ ಜಗತ್ತು ಸಂತೋಷಪಟ್ಟಿತ್ತು. ಪಟ್ಟಾಭಿಷೇಕವಾದಾಗ ಮತ್ತು ವನವಾಸಕ್ಕೆ ತೆರಳುವಾಗ ಶ್ರೀರಾಮ ಸ್ಥಿತಪ್ರಜ್ಞನಾಗಿದ್ದನು. ಯಥಾಸ್ಥಿತಿವಾದವನ್ನು ಧರ್ಮ ಪ್ರತಿಪಾದಿಸುತ್ತದೆ ಎಂಬುದನ್ನು ವಾಲ್ಮೀಕಿ ತೋರಿಸಿಕೊಟ್ಟಿದ್ದರು ಎಂದಿದ್ದಾರೆ. ಅಯೋಧ್ಯೆಯಲ್ಲಿರುವ ರಾಮ ಮತ್ತು ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆಯಲ್ಲಿ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ