ಗೃಹಲಕ್ಷ್ಮಿ ಪರಿಹಾರಕ್ಕಾಗಿ ಖುದ್ದು ಫೀಲ್ಡ್ ಗಿಳಿದ ಸಚಿವೆ ಹೆಬ್ಬಾಳ್ಕರ್

ಬುಧವಾರ, 8 ನವೆಂಬರ್ 2023 (15:25 IST)
ಬೆಂಗಳೂರು ಒನ್ ಕೇಂದ್ರದಲ್ಲಿ ಸಿಡಿಪಿಓಗಳನ್ನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೀಟಿಂಗ್ ಕರೆದಿದ್ದು,ಸಭೆಯಲ್ಲಿ ಕೆಲ ಜಿಲ್ಲಾಧಿಕಾರಿಗಳ ವಿರುದ್ದ ಹೆಬ್ಬಾಳ್ಕರ್ ಗರಂ ಆಗಿದ್ದಾರೆ.ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಫಲಾನುಭವಿಗಳು ಬಾಕಿ ಇದ್ದಾರೆ ಎಂಬುದರ ಬಗ್ಗೆ ಸಚಿವರು ಮಾಹಿತಿ ಪಡೆಯುತ್ತಿದ್ದಾರೆ.
 
ಒಂದು ವಾರದ ಒಳಗಾಗಿ ಎಲ್ಲಾ ಸಮಸ್ಯೆಗಳನ್ನು ಬಗ್ಗೆ ಹಾರೈಸುವಂತೆ ಅಧಿಕಾರಿಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಖಡಕ್ ಸೂಚನೆ ಕೊಟ್ಟಿದ್ದಾರೆ.ಯೋಜನೆ ಜಾರಿ ಆಗಿ 4ತಿಂಗಳು ಕಳೆಯುತ್ತಿದೆ ಏನ್ ಮಾಡ್ತಾ ಇದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು,ಯಾದಗಿರಿ ಜಿಲ್ಲೆ ಒಂದರಲ್ಲೇ 24 ಸಾವಿರ ಬಾಕಿ ಇದೆ.ಉಳಿದವರು  ಯಾಕೆ ಬಂದಿಲ್ವಾ ಅಂತಾ ಸಚಿವರು ಗರಂ ಆಗಿದ್ದಾರೆ.
 
ಗೃಹಲಕ್ಷ್ಮಿ ಯೋಜನೆ ಜಾರಿ ಆಗಿ 4 ತಿಂಗಳು ಕಳೆಯುತ್ತಿದೆ.ಇದುವರೆಗೂ ಒಂದೇ ಕಂತಿನ ಹಣ ಜಮೆ ಆಗಿದೆ ಎಂದು ಫಲನುಭವಿಗಳು ಆಕ್ರೋಶ ಹೊರಹಾಕಿದ್ದಾರೆ.ಇನ್ನೊಂದು ವಾರದ ಒಳಗೆ ಎಲ್ಲವು ಕ್ಲಿಯರ್ ಮಾಡುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ