ಸಚಿವ ಜಮೀರ್ ಅಹ್ಮದ್, ರೋಷನ್ ಬೇಗ್ ಕಳ್ಳೆತ್ತುಗಳಂತೆ...!

ಶುಕ್ರವಾರ, 14 ಜೂನ್ 2019 (13:50 IST)
ಈ ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮೀಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ. ಹೀಗಂತ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಜಿಂದಾಲ್ ಗೆ  ಭೂಮಿ‌ ಮಾರಾಟ ನಿರ್ಧಾರ ವಾಪಸ್ ಪಡೆಯುವವರಗೆ ಹೋರಾಟ ನಿಲ್ಲಲ್ಲ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಇನ್ನು, ಐಎಂಎ ವಂಚನೆ ಪ್ರಕರಣದಲ್ಲಿ ಜಮೀರ್ ಮತ್ತು ರೋಷನ್ ಬೇಗ್ ರನ್ನು ಬಂಧಿಸಬೇಕು. ಜಮೀರ್ ಮತ್ತು ರೋಷನ್ ಬೇಗ್ ಇಬ್ಬರೂ ಮೈತ್ರಿ ಪಕ್ಷದ ಕಳ್ಳೆತ್ತುಗಳು. ಎಸ್ ಐಟಿಗೆ ಹೋಗಿ ಹೇಳು ಎಂದು ಸಿದ್ದರಾಮಯ್ಯ ರೋಷನ್ ಬೇಗ್ ಗೆ ಹೇಳುತ್ತಾರೆ ಹೊರತು ಜಮೀರ್ ಗೆ ಏಕೆ ಹೇಳಲಿಲ್ಲ. ಈ ಪ್ರಕರಣ ಸಿಬಿಐಗೆ ಕೊಟ್ಟು ಜಮೀರ್ ಮತ್ತು ರೋಷನ್ ಬೇಗ್ ನ ಲಾಕಪ್ ಗೆ ಹಾಕಿ ಕ್ರಿಮಿನಲ್ ಗಳನ್ನು ಬೆಂಡೆತ್ತುವಂತೆ ಬೆಂಡತ್ತಿದ್ರೆ ಸತ್ಯ ತಾನಾಗೇ ಹೊರಗೆ ಬರುತ್ತದೆ ಎಂದರು.

ಜಿಂದಾಲ್ ಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು. ಹೋರಾಟ ನಡೆಸದಿದ್ದರೆ ರಾಜ್ಯವನ್ನು ಮಾರಾಟ ಮಾಡಲ್ಲ ಎನ್ನುವುದು ಗ್ಯಾರಂಟಿ. ಕಬ್ಬಿಣದ ಅದಿರು ಇರುವ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ.

ಎಷ್ಟು ಶಾಸಕರಿಗೆ, ಸಚಿವರಿಗೆ ಮುಖ್ಯಮಂತ್ರಿಗೆ ಕಾಂಗ್ರೆಸ್ ಜೆಡಿಎಸ್ ನಾಯಕರಿಗೆ ಎಷ್ಟು ಕಿಕ್‌ಬ್ಯಾಕ್‌ ನೀಡಿದ್ದೀರಿ? ಎಂದು ಕೇಳಿದ್ರು. ಬಿಜೆಪಿ ಮೊದಲ ದಿನವೇ ಎಚ್ಚರಿಕೆ ನೀಡಿದರೆ ಬಿಜೆಪಿಯವರಿಗೆ ಕೆಲಸವಿಲ್ಲ ಎಂದಿದ್ದರು. ಹೆಚ್. ಕೆ. ಪಾಟೀಲ್, ಹೆಚ್.ವಿಶ್ವನಾಥ್, ಎಸ್. ಆರ್. ಪಾಟೀಲ್, ಬಸವರಾಜ ಹೊರಟ್ಟಿ ಗೆ ಕೆಲಸ ಇಲ್ಲವೇ ಎಂದು ಪ್ರಶ್ನಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ