ಕೆಪಿಎಸ್ ಸಿ ವಿರುದ್ಧ ಸುರೇಶ್ ಕುಮಾರ್ ಕೆಂಡಾಮಂಡಲ

ಬುಧವಾರ, 12 ಜೂನ್ 2019 (19:21 IST)
ಕೆಪಿಎಸ್ ಸಿ ವಿರುದ್ಧ ಸುರೇಶ್ ಕುಮಾರ ಕೆಂಡಾಮಂಡಲರಾಗಿ ಪ್ರತಿಭಟನೆ ನಡೆಸಿದ್ದಾರೆ.

2015ರಲ್ಲಿ ಕೆಪಿಎಸ್ ಸಿ ಸಂದರ್ಶನ  ನಡೆದಿದೆ. ಎರಡು ವರ್ಷವಾದ ಬಳಿಕ ಫಲಿತಾಂಶ ಪ್ರಕಟವಾಗಿದೆ. ಇದುವರಗೆ ಸಂದರ್ಶನಕ್ಕೆ ವೇಳಾಪಟ್ಟಿ ಪ್ರಕಟಿಸಿಲ್ಲ. ಕೆಪಿಎಸ್ ಸಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ನಡುವೆ ಹೊಂದಾಣಿಕೆಯ ಕೊರತೆಯಾಗಿದೆ. ಇಬ್ಬರ ಜಗಳದಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಇನ್ನು ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಕೆಪಿಎಸ್ ಸಿ ಕಾರ್ಯದರ್ಶಿ ಬಂದು ಸಂದರ್ಶನದ ವೇಳಾಪಟ್ಟಿ ಪ್ರಕಟಿಸುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ. ಹೀಗಂತ  ಸುರೇಶ್ ಕುಮಾರ ಪಟ್ಟು ಹಿಡಿದು ಕುಳಿತ ಘಟನೆ ನಡೆದಿದೆ. ಇದನ್ನೂ ನಿರ್ಲಕ್ಷಿಸಿದ್ರೆ ಮುಂದಾಗುವ ಅನಾಹುತಗಳಿಗೆ ನಾವು ಹೊಣೆಯಲ್ಲ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ