ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಜೆಡಿಎಸ್, ಬಿಜೆಪಿಯವರು ಕೇವಲ ಚುನಾವಣಾ ಗಿಮಿಕ್ ಎಂದು ಜರಿದರು. ಆದರೆ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ರಾಜ್ಯದ ಹೆಣ್ಣುಮಕ್ಕಳು ಇದರ ಹೆಚ್ಚು ಲಾಭವನ್ನು ಪಡೆಯುತ್ತಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಬಿಜೆಪಿ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾಪದ ವಿಮೋಚನೆಗಾಗಿ ಪಾಪಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿದ ತಕ್ಷಣ ಅವರ ಪಾಪಗಳೆಲ್ಲಾ ಹೋಗುತ್ತವೆ ಎಂದು ಎಂದುಕೊಂಡರು. ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರೆ ಸಾಲುವುದಿಲ್ಲ. ಇಡೀ ರಾಜ್ಯ, ದೇಶವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿದರೆ ಜನರು ಅವರ ಪಾಪಗಳನ್ನು ಕ್ಷಮಿಸಬಹುದು ಎಂದು ವ್ಯಂಗ್ಯ ಮಾಡಿದರು.
2013 ರಿಂದ ಸಿದ್ದರಾಮಯ್ಯ ಅವರ ಸಚಿವಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನಗಳ ಕಾಲ ಅವರನ್ನು ನೋಡಿದ್ಧೇನೆ. ಅವರು ಯಾವುದೇ ಕಾರಣಕ್ಕೂ ಭ್ರಷ್ಟರಾಗಲು ಸಾಧ್ಯವೇ ಇಲ್ಲ. ಅವರಷ್ಟು ಜನಪರವಾಗಿ ಯೋಚನೆ ಮಾಡುವ ವ್ಯಕ್ತಿಯನ್ನು ನಾನು ನೋಡಿಲ್ಲ. ಯಾವುದೇ ಕಾರಣಕ್ಕೂ ಕಾನೂನು ಬಿಟ್ಟು ಕೆಲಸ ಮಾಡುವವರಲ್ಲ. ಆಡಳಿತದಲ್ಲಿ ಕಪ್ಪುಚುಕ್ಕೆಯಿಲ್ಲದ ವ್ಯಕ್ತಿ. ಸಿದ್ದರಾಮಯ್ಯ ಅವರ ಪತ್ನಿಗೆ ಅಣ್ಣನಿಂದ ಉಡುಗೊರೆ ಬಂದರೆ ಇದರಲ್ಲಿ ಮೋಸವೇನಿದೆ. ಇದು ಹಗರಣ ಹೇಗಾಗುತ್ತದೆ. ಬಿಜೆಪಿ ಸರ್ಕಾರ ಇದ್ದಾಗಲೇ ಸೈಟು ಹಂಚಿಕೆ ಮಾಡಿ. ಈಗ ಅವರೇ ಅವರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.