ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ಚಿನ್ನಯ್ಯನನ್ನು ಪೊಲೀಸರು ಈಗ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಬೆಳ್ತಂಗಡಿ ಠಾಣೆಯಲ್ಲಿ ಚಿನ್ನಯ್ಯನನ್ನು ಇದುವರೆಗೆ ಇರಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಎಸ್ಐಟಿ ಅಧಿಕಾರಿಗಳ ಮುಂದೆ ಚಿನ್ನಯ್ಯ ಸಾಕಷ್ಟು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಬುರುಡೆ ಗ್ಯಾಂಗ್ ನಿರ್ದೇಶನದ ಮೇರೆಗೇ ಈ ಕೆಲಸ ಮಾಡಿದ್ದಾಗಿ ಹೇಳಿದ್ದ.
ಅದರಂತೆ ತಾನು ಈ ಮೊದಲು ತಂದಿದ್ದ ಬುರುಡೆ ಎಲ್ಲಿಂದ ತಂದಿದ್ದು, ಯಾರು ಕೊಟ್ಟಿದ್ದು ಎಂದೂ ಹೇಳಿದ್ದ. ಈ ವೇಳೆ ಆತ ಬುರುಡೆಯನ್ನು ಬೆಂಗಳೂರಿಗೆ ತೆಗೆದುಕೊಂಡಿದ್ದಾಗಿ ಹೇಳಿದ್ದ. ಹೀಗಾಗಿ ಪೊಲೀಸರು ಈಗ ಬೆಂಗಳೂರಿಗೆ ಸ್ಥಳ ಮಹಜರು ನಡೆಸಲು ಆತನನ್ನು ಕರೆದುಕೊಂಡು ಬರುತ್ತಿದ್ದಾರೆ. ಈ ಮೊದಲು ಆತನನ್ನು ತಮಿಳುನಾಡು ಅಥವಾ ಮಂಡ್ಯಕ್ಕೆ ಕರೆದೊಯ್ದಿರಬಹುದು ಎನ್ನಲಾಗಿತ್ತು.
ಆತ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾನೆ. ಬುರುಡೆ ಗ್ಯಾಂಗ್ ತನ್ನನ್ನು ಯಾವೆಲ್ಲಾ ಸ್ಥಳಗಳಿಗೆ ಕರೆದೊಯ್ದಿತ್ತು. ಬುರುಡೆ ಎಲ್ಲಿಂದ ತರಲಾಗಿತ್ತು ಎಂದು ಹೇಳಿದ್ದ. ಹೀಗಾಗಿ ಈಗ ಆ ಎಲ್ಲಾ ಸ್ಥಳಗಳಿಗೆ ತೆರಳಿ ಮಹಜರು ನಡೆಸುವ ಸಾಧ್ಯತೆಯಿದೆ.