ಮಾರ್ಚ್ 22 ಕ್ಕೆ ಕರ್ನಾಟಕ ಬಂದ್ ಮಾಡಿದ್ರೂ ಪರೀಕ್ಷೆ ಮುಂದೂಡಲ್ಲ: ಕುಮಾರ್ ಬಂಗಾರಪ್ಪ

Krishnaveni K

ಶನಿವಾರ, 1 ಮಾರ್ಚ್ 2025 (13:04 IST)
ಬೆಂಗಳೂರು: ಮಾರ್ಚ್ 22 ಕ್ಕೆ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಆ ದಿನ ನಡೆಯಬೇಕಿರುವ ಪರೀಕ್ಷೆಗಳನ್ನು ಮುಂದೂಡಲ್ಲ ಎಂದು ಶಿಕ್ಷಣ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಬೆಳಗಾವಿ ಗಡಿಯಲ್ಲಿ ಮರಾಠಿಗರ ಉದ್ಧಟತನ ವಿರೋಧಿಸಿ ಕನ್ನಡ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ದಿನ ಹೆದ್ದಾರಿಗಳನ್ನು ತಡೆದು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

ಇದರಿಂದ ಬಸ್ ಹಾಗೂ ಇತರೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಹೀಗಾಗಿ ಈ ದಿನ 7,8 ಮತ್ತು 9 ನೇ ತರಗತಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುವುದು ಹೇಗೆ ಎಂದು ಚಿಂತೆಗೊಳಗಾಗಿದ್ದಾರೆ.

ಆದರೆ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಸ್ಪಷ್ಟನೆ ನೀಡಿದ್ದಾರೆ. ಮಕ್ಕಳ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಸಹಕಾರ ಕೊಡುವಂತೆ ಕನ್ನಡ ಪರ ಸಂಘಟನೆಗಳಿಗೂ ಮನವಿ ಮಾಡ್ತೀವಿ. ಹೋರಾಟ ನಿಮ್ಮ ಹಕ್ಕು. ಆದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ