ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಮನೆಯ ಯಜಮಾನಿಯರಿಗೆ ನೀಡಲಾಗುವ ಗೃಹಲಕ್ಷ್ಮಿ ಹಣ ಯಾವಾಗ ಕ್ರೆಡಿಟ್ ಆಗಲಿದೆ ಎಂಬ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಅಪ್ ಡೇಟ್ ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2,000 ರೂ. ಹಣ ಕ್ರೆಡಿಟ್ ಆಗುತ್ತದೆ. ಆದರೆ ಒಂದು ತಿಂಗಳ ಹಣ ಇನ್ನೂ ಜಮೆ ಆಗಿಲ್ಲ. ಕೇವಲ ಚುನಾವಣೆ ಇದ್ದಾಗ ಮಾತ್ರ ಮತದಾರರ ಸೆಳೆಯುವ ಉದ್ದೇಶದಿಂದ ಸರಿಯಾಗಿ ಹಣ ಕ್ರೆಡಿಟ್ ಮಾಡಲಾಗುತ್ತದೆ ಎಂಬ ಆರೋಪಗಳಿವೆ.
ಈ ಆರೋಪಗಳಿಗೆ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಒಂದು ತಿಂಗಳ ಹಣ ತಡವಾಗಿದೆ. ನೀವು ಹೇಳಿದ್ದು ನಿಜ. ಆದರೆ ನಾವು ಒಂದು ತಿಂಗಳ ಬಿಟ್ಟು ಒಂದು ತಿಂಗಳು ಹಾಕುತ್ತೇವೆ. ಇನ್ನೊಂದು ನಾಲ್ಕೈದು ದಿನಗಳಲ್ಲಿ ಹಣ ಕ್ರೆಡಿಟ್ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಆರೋಪ ಮಾಡುವವರು ಏನು ಮಾಡಿದ್ರೂ ಆರೋಪ ಮಾಡ್ತಾರೆ. ಎಲೆಕ್ಷನ್ ಟೈಮ್ ನಲ್ಲಿ ಹಣ ಹಾಕ್ತಾರೆ ಎಂದು ಆರೋಪಿಸುತ್ತಾರೆ. ಎಲೆಕ್ಷನ್ ಬಂದಾಗ ಮಾತ್ರ ಹಣ ಹಾಕುತ್ತೇವೆ ಎಂದೇನಿಲ್ಲ. ಈಗ ಎಲೆಕ್ಷನ್ ಏನೂ ಇಲ್ವಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.