ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲಿಡಬೇಕು: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದ

Krishnaveni K

ಶುಕ್ರವಾರ, 29 ಆಗಸ್ಟ್ 2025 (20:51 IST)
Photo Credit: X
ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲಿಡಬೇಕು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮೊಯತ್ರಾ ಎಲ್ಲೆ ಮೀರಿ ಮಾತನಾಡಿದ್ದಾರೆ. ಗಡಿ ರಕ್ಷಣೆ ಮಾಡಲು, ಮಹಿಳೆಯರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಅಮಿತ್ ಶಾ ತಲೆ ಕತ್ತರಿಸಬೇಕು ಎಂದಿದ್ದಾರೆ.

ಭಾರತಕ್ಕೆ ಬಾಂಗ್ಲಾದೇಶದ ಒಳನುಸುಳುಕೋರರ ಬಗ್ಗೆ ಮಾತನಾಡಿರುವ ಟಿಎಂಸಿ ಸಂಸದೆ ಇಂತಹದ್ದೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಭಾರತದ ಗಡಿಯನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ, ನೂರಾರು ಸಂಖ್ಯೆಯಲ್ಲಿ ಒಳನುಸುಳುಕೋರರು ನುಗ್ಗುತ್ತಿದ್ದರೆ, ನಮ್ಮ ಮಹಿಳೆಯರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲೆ ಪ್ರದರ್ಶನಕ್ಕಿಡಬೇಕು ಎಂದು ಅವರು ಹೇಳಿದ್ದಾರೆ.

ಟಿಎಂಸಿ ಸಂಸದೆಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಲಜ್ಜೆಗೆಟ್ಟ ಮತ್ತು ಧ್ವೇಷದ ವಿಷಭೀಜ ಬಿತ್ತುವ ಹೇಳಿಕೆ ಎಂದು ಬಿಜೆಪಿ ಕಿಡಿ ಕಾರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ