ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಚಿವ ಆರ್ ಅಶೋಕ್

ಸೋಮವಾರ, 20 ಮಾರ್ಚ್ 2023 (16:57 IST)
ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂಬ ವಿಚಾರಕ್ಕೆ ಸಚಿವ ಆರ್. ಅಶೋಕ್ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
 
ನನಗೂ ಸಿದ್ದರಾಮಯ್ಯ ಕಂಡ್ರೆ ಮರುಕ ಆಗ್ತಿದೆ.ಕಳೆದ ಆರು ತಿಂಗಳು ಸಿದ್ದರಾಮಯ್ಯ ಓಡು ಮಗಾ ಓಡು ಮಗಾ ಅಂತಾ ಓಡ್ತಾವ್ರೆ.ಎಲ್ಲು ಹೋದ್ರು ಕ್ಷೇತ್ರ ಸಿಕ್ತಿಲ್ಲ.ಒಂದ್ಕಡೆ ಊರಿಗೌಡ ನಂಜೇಗೌಡ ನೋಡಿ ಊರಿ ಹತ್ಕೊಂಡಿದೆ.ಈಗ ವರುಣ ಕ್ಷೇತ್ರ ಅಂತಾವ್ರೆ .ನನ್ನ ಪ್ರಕಾರ ವರುಣಾದಲ್ಲೂ ನಿಲ್ಲಲ್ಲ ಅನ್ಸುತ್ತೆ.ಯಾಕೆಂದರೆ ಅಲ್ಲೂ ಸಿದ್ದರಾಮಯ್ಯ ಸೋಲ್ತಾರೆ.ಟಿಪ್ಪು ಸುಲ್ತಾನ್ ಹಿಂದೆ ಅದೇ ಪರಿಸ್ಥಿತಿ.ಟಿಪ್ಪು ಜಯಂತಿ ಮಾಡಿದ್ದು ತಪ್ಪು ಅಂತ ಸಿದ್ದರಾಮಯ್ಯ ಕ್ಷಮಾಪಣೆ ಕೇಳಬೇಕು.ಹೀಗೆ ಹೇಳಿದರೆ ಜನರು ಯಾವುದಾದರೂ ಕ್ಷೇತ್ರ ಸಿದ್ದರಾಮಯ್ಯಗೆ ಕೊಡಬಹುದು.ಇಲ್ಲ ಅಂದ್ರೆ ಓಡು ಓಡು ಮಗಾ ಸಿದ್ದರಾಮಯ್ಯ ಓಡಬೇಕು .ಸಿದ್ದರಾಮಯ್ಯ ಎಲ್ಲಾ ಬೇರೆ ರಾಜ್ಯ ನೋಡಿಕೊಳ್ಳಬೇಕು.ಇಲ್ಲಂತೂ ಅವರಿಗೆ ಕ್ಷೇತ್ರ ಸಿಗಲ್ಲ.ಟಿಪ್ಪು ಜಯಂತಿ ಮಾಡಿದ್ದ ತಪ್ಪಿಗೆ ಬೇರೆ ರಾಜ್ಯ ನೋಡ್ಕೋಬೇಕು ಎಂದು ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ