ಡಿಸೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ಸುಳಿವು ನೀಡಿದ ಸಚಿವ ರಾಮಲಿಂಗ ರೆಡ್ಡಿ
ಬುಧವಾರ, 16 ಆಗಸ್ಟ್ 2023 (20:42 IST)
ಹೊಸ ಸರ್ಕಾರ ಟೇಕ್ ಆಫ್ ಆಗುತ್ತಲೇ ಪಕ್ಷದ ಆಂತರಿಕ ಅಸಮಧಾನ ವಿಚಾರ ಹೆಚ್ಚಾಗುತ್ತಲೇ ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.. ಅಸಮಧಾನ ಕಂಟ್ರೋಲ್ ಮಾಡೋದಕ್ಕೆ ಸಿಎಂ ಹಾಗೂ ಡಿಸಿಎಂ ಜಿಲ್ಲಾವಾರು ಸಭೆಗಳನ್ನ ಮಾಡ್ತಿದ್ದಾರೆ.ಈಗಾಗಲೇ 20 ಜಿಲ್ಲೆಗಳ ಸಭೆ ಮಾಡಿರುವ ಸಿಎಂ , ಇಗ ಮತ್ತೆ ಜನಪ್ರತಿನಿಧಿಗಳ ಸಭೆ ಮಾಡ್ತಿದ್ದಾರೆ. ಇವತ್ತು ಮಹತ್ವದ ಸಭೆ ಮಾಡಲಾಯ್ತು ..ಬೆಂಗಳೂರು ನಗರ , ಕೋಲಾರ, ದಕ್ಷಿಣಕನ್ನಡ ಜಿಲ್ಲೆಯ ಆಢಳಿತ ಪಕ್ಷದ ಶಾಸಕರು ಸಚಿವರ ಸಭೆ ನಡೆಸಲಾಯ್ತು. ಅದ್ರಲ್ಲೂ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಸದ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ವಿಚಾರಗಳ ಬಗ್ಗೆ ಚರ್ಚೆಯಾಗಿದೆ.ಶಾಸಕರ ಅಸಮದಾನ ಶಮನಕ್ಕೆ ಇಂದು ಸಿಎಂ ಹಾಗೂ ಡಿಸಿಎಂ ಸಭೆ ನಡೆಸಿದ್ರು . ಈ ಸಭೆಯಲ್ಲಿ ಬೆಂಗಳೂರು ನಗರ, ಕೋಲಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಸಚಿವರು ಭಾಗಿಯಾಗಿದ್ರು.. ಮೂರು ಜಿಲ್ಲೆಗಳ ಪೈಕಿ ಬೆಂಗಳೂರು ನಗರದ ಸಭೆ ಸಾಕಷ್ಟು ಮಹತ್ವವನ್ನ ಪಡೆದಿತ್ತು.. ಈ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಅನುದಾನ ಬಿಡುಗಡೆ , ಕುಡಿಯುವ ನೀರು ಸೇರಿ ಹಲವು ವಿಚಾರಗಳ ಬಗ್ಗೆ ಸತತವಾಗಿ ಮೂರು ಘಂಟೆಗಳ ಕಾಲ ಚರ್ಚೆ ನಡೆಸಲಾಯ್ತು.
ಮೂರು ಜಿಲ್ಲೆಗಳ ಪೈಕೆ ಬೆಂಗಳೂರಿನ ಸಭೆಯಲ್ಲಿ ಸರ್ಕಾರಕ್ಕೆ ಸಂಕಷ್ಟವಾಗ್ತಿರುವ ಗುತ್ತಿಗೆದಾರರ ಬಾಕಿ ಬಿಲ್ ವಿಚಾರ ಪ್ರತಿಧ್ವನಿಸಿದೆ.. ಸಭೆಯಲ್ಲಿ ಗುತ್ತಿಗೆ ದಾರರ ಬಾಕಿ ಬಿಲ್ ಪಾವತಿ ವಿಚಾರ ಚರ್ಚೆಯಾಗಿದೆ.. ಬಿಲ್ ಪಾವತಿ ಮಾಡದೇ ಹೊದ್ರೆ ಮುಂಬರುವ ಬಿಬಿಎಂಪಿ ಎಲೆಕ್ಷನ್ ಗೆ ಡ್ಯಾಮೇಜ್ ಆಗುತ್ತೆ ಅದರಿಂದ ಆದಷ್ಟು ಬೇಗ ಬಿಲ್ ಪಾವತಿಸುವಂತೆ ಸಿಎಂ ಮುಂದೆ ಬೆಂಗಳೂರು ಶಾಸಕರು ಪ್ರಸ್ತಾಪ ಮಾಡಿದ್ದಾರೆ.. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಿಎಂ ಹಾಗೂ ಡಿಸಿಎಂ , ಈಗಾಗಲೆ ಎಸ್ ಐಟಿ ತನಿಖೆಗೆ ನೀಡಲಾಗಿದೆ ಇನ್ನು ೨೦ ದಿನಗಳಲ್ಲಿ ಇದರ ವರದಿ ಬರಲಿದ್ದು ನಂತರ ಬಿಲ್ ಪಾವತಿಗೆ ಮುಂದಾಗೋಣಾ, ಈಗಲೆ ಬಿಲ್ ಪಾವತಿ ಮಾಡುದ್ರೆ ಬಿಜೆಪಿ ವಿರುದ್ದ ೪೦% ಕಮಿಷನ್ ಆರೋಪಕ್ಕೆ ಅರ್ಥ ಇರೊಲ್ಲಾ.. ವರದಿ ಬಂದ ನಂತರ ಕ್ಲೀನ್ ಹ್ಯಾಂಡ್ ಯಾರು ಇರ್ತಾರೆ ಅವರಿಗೆ ಬಿಲ್ ಪಾವತಿ ಮಾಡಿ, ಕಳಪೆ ಕಾಮಗಾರಿ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗ್ತಿದೆ.
ಬಿಬಿಎಂಪಿ ಚುನಾವಣೆಯನ್ನ ಪ್ರತಿಷ್ಟೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಟಾಸ್ಕ್ ಗಳನ್ನ ನೀಡಿದ್ದಾರೆ.. ಲೋಕಸಭಾ ಚುನಾವಣೆಗೂ ಮೊದಲೇ ಅಂದ್ರೆ ಡಿಸೆಂಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರೋ ಹಿನ್ನೆಲೆ ಪಕ್ಷ ಸಂಘಟನೆ ಮತ್ತು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಲಾಗಿದೆ.. ಗ್ಯಾರಂಟಿ ಹಾಗೂ ಬ್ರಾಂಡ್ ಬೆಂಗಳೂರು ವಿಚಾರವನ್ನ ಮನೆ ಮನೆಗೆ ತಲುಪಿಸಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಬಿಬಿಎಂಪಿ ಗದ್ದುಗೆ ಏರುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.
ಇನ್ನೂ ಕೋಲಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಭೆ ನಡೆಸಿ ಲೋಕಸಭಾ ಚುನಾವಣೆ ಸೇರಿದಂತೆ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಅನುದಾನದ ವಿಚಾರವಾಗಿ ಅಸಮಧಾನಕ್ಕೆ ಸಿಎಂ ಡಿಸಿಎಂ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡ್ತಿವಿ ಅಂತ ಭರವಸೆ ನೀಡಿ ಶಾಸಕರ ಅಭಿಪ್ರಾಯಗಳನ್ನ ಸಚಿವರು ಪಡೆಯಬೇಕು .. ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೆ ತಲುಪಿಸಬೇಕಂತ ಸಲಹೆ ನೀಡಿದ್ರು