ಬಿಬಿಎಂಪಿ ಲ್ಯಾಬ್ ಕೇಸ್ ನಲ್ಲಿ ಹಿರಿಯ ಅಧಿಕಾರಿಗಳಿಗೆ ನೊಟೀಸ್

ಸೋಮವಾರ, 14 ಆಗಸ್ಟ್ 2023 (15:00 IST)
ಬಿಬಿಎಂಪಿ ಲ್ಯಾಬ್ ನಲ್ಲಿ ಬೆಂಕಿ ಹೊತ್ತಿದ್ದ ಕೇಸ್ ಸಂಬಂಧ ಹಲಸೂರ್ ಗೇಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.‌. ಸಿಬ್ಬಂದಿ ಲೆವೆಲ್ ವಿಚಾರಣೆ ಮುಗಿಸಿರೋ ಪೊಲೀಸರು ಈಗ ಹಿರಿಯ ಅಧಿಕಾರಿಗಳ ಕಡೆ ಮುಖ ಮಾಡಿದ್ದರೆ.. ಫಸ್ಟ್ ಸ್ಟೆಪ್ ನಲ್ಲಿ ದೂರು ಕೊಟ್ಟಿದ್ದ ಚೀಫ್ ಎಂಜಿನಿಯರ್ ಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯಯಿಂದ್ಲೇ ಬಿಬಿಎಂಪಿ ಲ್ಯಾಬ್ ನಲ್ಲಿ ಅಗ್ನಿ ಅವಘಢ ಸಂಭವಿಸಿತ್ತು ಅನ್ನೋದು ಪ್ರಾಥಮಿಕ ತನಿಖೆ ವೇಳೆಯೇ ಗೊತ್ತಾಗಿತ್ತು.. ಮೂವರು ಬಿಬಿಎಂಪಿ ಸಿಬ್ಬಂದಿಯನ್ನ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಅಧಿಕಾರಿಗಳ ನಿರ್ಲಕ್ಷ್ಯ ಕ್ಲಿಯರ್ ಅನ್ನೋದು ಗೊತ್ತಾಗಿತ್ತು.. ಘಟನೆ ತೀವ್ರತೆಯಿಂದ ಒಂಭತ್ತು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ನಿಧಾನಕ್ಕೆ ಚೇತರಿಸಿಕೊಳ್ತಿದ್ರೆ ಇತ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..  ಸಿಬ್ಬಂದಿಯನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದ ಹಲಸೂರ್ ಗೇಟ್ ಪೊಲೀಸರು ಈಗ ಹಿರಿಯ ಅಧಿಕಾರಿಗಳಿಗೆ ನೊಟೀಸ್ ನೀಡ್ತಿದ್ದಾರೆ.

ಎಂಜಿನಿಯರ್ ಲೆವೆಲ್ ನ ಅಧಿಕಾರಿಗಳು ಮಾಡ್ಬೇಕಿದ್ದ ಕ್ವಾಲಿಟಿ ಟೆಸ್ಟ್ ಅನ್ನ ಡಿ ಗ್ರೂಪ್ ನೌಕರ ಮಾಡಿದ್ದ ಪರಿಣಾಮ ಇಷ್ಟು ದೊಡ್ಡ ಘಟನೆಗೆ ಕಾರಣ ಅನ್ನೋದು ಈಗಾಗ್ಲೇ ಪ್ರೂವ್ ಆಗಿದೆ.. ಆದ್ರೆ ಇದ್ರ ಹಿಂದೆ ದೊಡ್ಡ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಇದೆ ಅನ್ನೋದು ಸದ್ಯಕ್ಕಿರೋ ಅನುಮಾನ.. ಯಾಕಂದ್ರೆ ಪ್ರತೀ ಬಾರಿಯೂ ಡಿ ಗ್ರೂಪ್‌ ನೌಕರ ಸುರೇಶ್ ಹೇ ವಸ್ತುಗಳ ಕ್ವಾಲಿಟಿ ಚೆಕ್ ಮಾಡ್ತಿದ್ದ.. ಅಧಿಕಾರಿಗಳು ಆತನಿಗೆ ಕೊಟ್ಟು ಟೆಸ್ಟ್ ಮಾಡಿಸ್ತಿದ್ರು ಅನ್ನೋದು ಸದ್ಯ ಗೊತ್ತಾಗಿರೋ ವಿಷ್ಯ ಅಲ್ಲಿರೋ ಅಧಿಕಾರಿಗಳೇನೋ ಈ ರೀತಿ ಕಳ್ಳಾಟ ಆಡಿದ್ದಾರೆ.. ಆದ್ರೆ ಮೇಲಾಧಿಕಾರಿಗಳಿಗೆ ಈ ಬಗ್ಗೆ ಗಮನವೇ ಇರ್ಲಿಲ್ವಾ ಅನ್ನೋದು ಸದ್ಯಕ್ಕಿರೋ ಪ್ರಶ್ನೆ.. ಚೀಫ್ ಎಂಜಿನಿಯರ್ ಸೇರಿ ಹಿರಿಯ ಅಧಿಕಾರಿಗಳು ಆಗಾಗ ಲ್ಯಾಬ್ ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸ್ಬೇಕು.. ಜೊತೆಗೆ ಸಂಬಂಧಿಸಿದ ಡಿಪಾರ್ಟ್ಮೆಂಟ್ ನಲ್ಲಿ ಏನೇನ್ ನಡೀತಿದೆ ಅನ್ನೋದ್ರ ಬಗ್ಗೆ ಮಾಹಿತಿ ಇರ್ಬೇಕು.. ಆದ್ರೆ ಒಂದು ಲ್ಯಾಬ್ ನಲ್ಲಿ ಓರ್ವ ಡಿ ಗ್ರೂಪ್ ನೌಕರನಿಂದ ಇಷ್ಟು ದೊಡ್ಡ ಅವಘಢ ನಡೆದಿರೋವರೆಗೂ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿರಲಿಲ್ವಾ ಅನ್ನೋ ಮಾತುಗಳು ಕೇಳಿ ಬರ್ತಿದೆ.. ಇಲ್ಲಿ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಮೇಲು ನೋಟಕ್ಕೆ ಕಂಡು ಬರ್ತಿದ್ದು.. ದೂರು ನೀಡಿ ಆಂತರಿಕ ತನಿಖೆ ಮಾಡ್ತಿರೋ ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಗೂ ನೊಟೀಸ್ ನೀಡಿದ್ದಾರೆ.. ಇಂದು ಸಿಇ ಪ್ರಹ್ಲಾದ್ ಗೆ ನೊಟೀಸ್ ನೀಡಿರೋ ಹಲಸೂರ್ ಗೇಟ್ ಪೊಲೀಸರು ನಾಳೆ‌ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ