ರವಿ ಬಳಿ ಸಚಿವರ ಲೇಟರ್ ಹೆಡ್ಗಳು ಪತ್ತೆ
ವರ್ಗಾವಣೆ ದಂಧೆಯಲ್ಲೂ ಕಿಂಗ್ ಪಿನ್ ಸ್ಯಾಂಟ್ರೋ ರವಿ ಕೈವಾಡವಿದೆಯಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ಬಳಿ ಸಚಿವರುಗಳ ಲೇಟರ್ ಹೆಡ್ಗಳು ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಈ ರವಿ ಮಾಸ್ಟರ್ ಮೈಂಡ್ ಆಗಿದ್ದನಂತೆ. ಇನ್ಸ್ಪೆಕ್ಟರ್, DySPಗಳಿಗೆ ಈತ ಪ್ರಮೋಷನ್ ಮಾಡಿಸ್ತಿದ್ದನಂತೆ. ಪ್ರಮೋಷನ್ ಮಾಡಿಸಿ ತನ್ನ ಸ್ಟೇಷನ್ಗೆ ಹಾಕಿಕೊಳ್ತಿದ್ದನಂತೆ. ಈತನ ಬಳಿ ಕೆಲ ಸಚಿವರು ಮತ್ತು ಶಾಸಕರ ಲೆಟರ್ ಹೆಡ್ ಪತ್ತೆಯಾಗಿದ್ದು, ಈತನ ಈ ದಂಧೆಗೆ ಸಚಿವರು, ಶಾಸಕರು ಸಾಥ್ ನೀಡಿದ್ದಾರಾ ಎಂಬ ಅನಮಾನ ದಟ್ಟವಾಗಿದೆ.