Santhosh Lad: ಪಾಕಿಸ್ತಾನ ಪರ ಯಾಕೆ ಘೋಷಣೆ ಕೂಗ್ತಿದ್ದಾರೆ ಅಂತ ಅರ್ಥಮಾಡಿಕೊಳ್ಳಲಿ: ಸಚಿವ ಸಂತೋಷ್ ಲಾಡ್
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಇತ್ತೀಚೆಗೆ ಪಾಕಿಸ್ತಾನ ಪರ ಘೋಷಣೆ ಕೂಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರು ಯಾಕೆ ಕೂಗುತ್ತಿದ್ದಾರೆ ಎಂಬುದಕ್ಕೆ ನಾನಾ ಕಾರಣಗಳಿವೆ. ಅವರ ಮೇಲೂ ಅತ್ಯಾಚಾರಗಳು ಆಗಿಲ್ವಾ? ಅದನ್ನೆಲ್ಲಾ ನೋಡಬೇಕಾಗುತ್ತದೆ ಎಂದಿದ್ದಾರೆ.
ಈ ಮೂಲಕ ಪಾಕ್ ಪರ ಘೋಷಣೆ ಕೂಗಿದವರನ್ನೇ ಸಮರ್ಥಿಸಿಕೊಂಡಂತಿತ್ತು ಸಚಿವರ ಹೇಳಿಕೆ. ಹಾಗಿದ್ದರೂ ನಾನು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಬೆಂಬಲಿಸುತ್ತಿಲ್ಲ. ನನ್ನ ತಮ್ಮನೇ ಆ ರೀತಿ ಕರೆದರೂ ತಕ್ಕ ಶಿಕ್ಷೆಯಾಗಬೇಕು ಎಂದರು.
ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆಯಬೇಕು ಎಂದು ನಾನೇ ಅಮಿತ್ ಶಾ ಸಿಕ್ಕಾಗ ಹೇಳಿದ್ದೇನೆ. 1971 ರಲ್ಲಿ ಪಾಕಿಸ್ತಾನದವರನ್ನು ಇಂದಿರಾ ಗಾಂಧಿಯವರು ಮಂಡಿಯೂರಿಸಿದ್ರು. ಇದೇ ರೀತಿ ಈಗ ಮತ್ತೆ ಆಗಬೇಕಿದೆ ಎಂದಿದ್ದಾರೆ.