ರಸಗೊಬ್ಬರ ಬೇಕಿದ್ರೆ ಕೇಂದ್ರ ಸರ್ಕಾರವನ್ನೇ ಕೇಳಿ, ನಮ್ಮನ್ನಲ್ಲ: ಸಚಿವ ಶಿವಾನಂದ ಪಾಟೀಲ್

Krishnaveni K

ಬುಧವಾರ, 23 ಜುಲೈ 2025 (10:08 IST)
ಬೆಂಗಳೂರು: ಯೂರಿಯಾ ಗೊಬ್ಬರ ಸಿಗದೇ ಅನ್ನದಾತರು ಬೀದಿಗಳಿದು ಹೋರಾಟ ಮಾಡುತ್ತಿದ್ದರೆ ಇತ್ತ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಗೊಬ್ಬರ ಬೇಕಿದ್ರೆ ಕೇಂದ್ರವನ್ನೇ ಕೇಳಿ ನಮ್ಮನ್ನಲ್ಲ ಎಂದಿದ್ದಾರೆ.

ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಆದರೆ ಸಕಾಲದಲ್ಲಿ ರಸಗೊಬ್ಬರ ಸಿಗದೇ ರೈತರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಚಿತ್ರದುರ್ಗದ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಎಪಿಎಂಸಿಯಲ್ಲಿ ಯೂರಿಯಾ ಗೊಬ್ಬರ ಒಬ್ಬರಿಗೆ 2 ಚೀಲ ಮಾತ್ರ ಎಂಬ ಫಲಕ ಹಾಕಲಾಗಿತ್ತು. ಇದು ರೈತರನ್ನು ಕಂಗಾಲು ಮಾಡಿದೆ. ಇನ್ನು ರೈತರ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಸಚಿವ ಶಿವಾನಂದ ಪಾಟೀಲ್ ಇದಕ್ಕೆಲ್ಲಾ ಕೇಂದ್ರ ಸರ್ಕಾರ ಕಾರಣ ಎಂದಿದ್ದಾರೆ.

ರಾಜ್ಯಕ್ಕೆ 13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕು ಎಂದು ಕೇಳಿದ್ದೆವು. ಆದರೆ ಕೇವಲ 4 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಒದಗಿಸಿದ್ದಾರೆ. ಯೂರಿಯಾ ಒದಗಿಸುವುದು ಕೇಂದ್ರ ಸರ್ಕಾರದ ಕೆಲಸ. ಅವರು ಸರಿಯಾಗಿ ಒದಿಗಿಸಿಲ್ಲ. ಹೀಗಾಗಿ ಗೊಬ್ಬರ ಬೇಕಿದ್ದರೆ ಕೇಂದ್ರ ಸರ್ಕಾರವನ್ನೇ ಕೇಳಿ. ನಮ್ಮನ್ನಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ