ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಶತಾಯಗತಾಯವಾಗಿ ಅಧಿಕಾರ ಹಿಡಿಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಎಲ್ಲಿ ಬಿಜೆಪಿ ಹವಾ ಇಲ್ಲವೋ ಅಲ್ಲಿ ಆಪರೇಷನ್ ಕಮಲ ಮಾಡುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಬಗ್ಗೆ ಸ್ವತಃ ಸಚಿವ ಎಸ್‌ಟಿ ಸೋಮಶೇಖರ್ ಸುಳಿವು ನೀಡಿದ್ದು, 2ನೇ ಹಂತದ ಆಪರೇಷನ್ಗೆ ಕಮಲ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ಈ ಭಾಗದ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್, ಜೆಡಿಎಸ್ನ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ. ಆ ನಾಯಕರು ಯಾರೆಂದು ಈಗಲೇ ಹೇಳಲಾಗಲ್ಲ. ಅಂತಹ ನಾಯಕರ ಜೊತೆ ಕೊನೆ ಹಂತದ ಮಾತುಕತೆ ನಡೆಯುತ್ತಿದೆ. ಯಾವುದೇ ಷರತ್ತುಗಳಿಲ್ಲದೇ ಪಕ್ಷ ಸೇರಲು ನಾಯಕರು ಒಪ್ಪಿದ್ದಾರೆ. ಪಕ್ಷ ಸೇರಲು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಅನುಮತಿ ಬಾಕಿಯಿದೆ ಎಂದು ಹೇಳಿದರು.
ಜಿಟಿಡಿ ಪುತ್ರನಿಗೆ ಟಿಕೆಟ್ ನೀಡಲು ಹೈಕಮಾಂಡ್ನಿರ್ಧರಿಸಿದರೆ ಚಾಮರಾಜ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಬಿಜೆಪಿ ಬಂದು ಈ ಭಾಗದಲ್ಲಿ 8 ಸ್ಥಾನ ಗೆಲ್ಲಿಸೋದಾದ್ರೆ, ಪಕ್ಷಕ್ಕಾಗಿ ಕ್ಷೇತ್ರ ಸೇರಿದಂತೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧ. ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಎಂದು ಸಚಿವ ಸೋಮಶೇಖರ್ ಹೇಳಿಕೆಗೆ ಶಾಸಕ ನಾಗೇಂದ್ರ ಪುಷ್ಟಿ ನೀಡಿದ್ದಾರೆ.