ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ

ಭಾನುವಾರ, 17 ಮೇ 2020 (09:22 IST)
ಬೆಂಗಳೂರು: ಕೆಲವು ಖಾಸಗಿ ಶಾಲೆಗಳು ತಾವು ಮಕ್ಕಳ ಬಗ್ಗೆ ಭಾರೀ ಕಾಳಜಿವಹಿಸುತ್ತೇವೆಂದು ತೋರಿಸಿಕೊಳ್ಳಲೋ ಏನೋ ಎಂಬಂತೆ ಆನ್ ಲೈನ್ ಶಿಕ್ಷಣವನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ.


ಎಲ್ ಕೆಜಿ, ಯುಕೆಜಿ ತರಗತಿಗಳಿಗೂ ಆನ್ ಲೈನ್ ಶಿಕ್ಷಣ ನೀಡುವ ಆಫರ್ ನೀಡುತ್ತಿವೆ! ಇದರ ಬಗ್ಗೆ ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.

ಪುಟಾಣಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡಲು ಮುಂದಾದ ಶಾಲೆಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆಟ ಆಡಿಕೊಂಡು ಕಲಿಯಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಮೊಬೈಲ್, ಕಂಪ್ಯೂಟರ್ ಮುಂದೆ ಕಟ್ಟಿ ಹಾಕಿ ಆನ್ ಲೈನ್ ಶಿಕ್ಷಣವೆಂಬ ಶಿಕ್ಷೆ ನೀಡಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ