ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಷಕರ ಆಕ್ರೋಶ

ಭಾನುವಾರ, 17 ಮೇ 2020 (09:01 IST)
ಬೆಂಗಳೂರು: ಕೊರೋನಾವೈರಸ್ ಇನ್ನೂ ನಿಂತಿಲ್ಲ. ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವೆ ರಾಜ್ಯ ಸರ್ಕಾರ ಶಾಲೆ ಆರಂಭಿಸುವ ಬಗ್ಗೆ ಪ್ರಸ್ತಾಪವಿಟ್ಟಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.


ಒಂದರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಎರಡು ಪಾಳಿಯಲ್ಲಿ ಜೂನ್ ಮಧ್ಯಭಾಗದಿಂದ ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಮಾಧ‍್ಯಮಗಳಲ್ಲೂ ವರದಿಯಾಗುತ್ತಿದೆ.

ಈ ಬಗ್ಗೆ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ಇನ್ನೂ ವ್ಯಾಪಕವಾಗಿರುವಾಗ ಶಾಲೆ ಆರಂಭಿಸಲು ಇಷ್ಟು ಅವಸರವೇಕೆ? ಮಕ್ಕಳ ಜೀವವನ್ನು ಯಾಕೆ ಅಪಾಯದಲ್ಲಿ ದೂಡುತ್ತೀರಿ ಎಂದು ಹೆಚ್ಚಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರದಿಂದ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ