ಅಣ್ಣನ ಸ್ಥಾನ ತಮ್ಮನಿಗೆ: ಬಾಲಚಂದ್ರ ಜಾರಕಿಹೊಳಿ ಪರ ಶಾಸಕರ ಬ್ಯಾಟಿಂಗ್
ಈ ಮೊದಲು ರಮೇಶ್ ಜಾರಕಿಹೊಳಿ ಕೂಡಾ ರಾಜೀನಾಮೆ ನೀಡುವಾಗ ತನ್ನ ಖಾತೆಯನ್ನು ತಮ್ಮನಿಗೆ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದೀಗ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಒತ್ತಾಯ ಹೆಚ್ಚಿದ್ದು ಸಿಎಂ ನಿರ್ಧಾರ ಕೈಗೊಳ್ಳಬೇಕಿದೆ.
ಸದ್ಯಕ್ಕೆ ರಾಸಲೀಲೆ ವಿವಾದದಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿಗೆ ಆರೋಪ ಮುಕ್ತರಾಗದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಅವರ ಸ್ಥಾನವನ್ನು ಇನ್ನೊಬ್ಬರಿಗೆ ನೀಡುವ ಬಗ್ಗೆ ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.