ರಮೇಶ್ ರಾಸಲೀಲೆ ಯುವತಿಯ ಪತ್ತೆಗಾಗಿ ಪೊಲೀಸರ ತಲಾಶ್

ಭಾನುವಾರ, 7 ಮಾರ್ಚ್ 2021 (13:03 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದಲ್ಲಿದ್ದ ಯುವತಿಗಾಗಿ ಇದೀಗ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತೀವ್ರ ತಲಾಶ್ ನಡೆಸುತ್ತಿದ್ದಾರೆ.

 
ರಮೇಶ್ ಜಾರಕಿಹೊಳಿ ಜೊತೆ ಇದ್ದ ಯುವತಿಯ ಬಗ್ಗೆ ದೂರುದಾರ ದಿನೇಶ್ ಕಲ್ಲಳ್ಳಿ ಸರಿಯಾದ ಮಾಹಿತಿ ನೀಡಿರಲಿಲ್ಲ. ಹಾಗಿದ್ದರೂ ಪೊಲೀಸರು ಯುವತಿಯ ವಿಳಾಸ ಪತ್ತೆ ಮಾಡಿದ್ದರು ಎನ್ನಲಾಗಿತ್ತು. ಆದರೂ ಇದುವರೆಗೆ ಯುವತಿ ಎಲ್ಲಿದ್ದಾಳೆಂಬುದು ಪೊಲೀಸರಿಗೆ ಗೊತ್ತಾಗಿಲ್ಲ.

ಹೀಗಾಗಿ ನಗರದ ಪಿ.ಜಿ.ಗಳಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ವಿಡಿಯೋದಲ್ಲಿದ್ದ ಯುವತಿಯ ಹೇಳಿಕೆಯಾಧರಿಸಿಯೇ ರಮೇಶ್ ಜಾರಕಿಹೊಳಿ ಭವಿಷ್ಯ ನಿಂತಿದೆ. ಹೀಗಾಗಿ ಯುವತಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೆ ಆಕೆ ಖುದ್ದಾಗಿ ದೂರು ಕೊಟ್ಟಿಲ್ಲ. ಆಕೆಯ ಪರವಾಗಿ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ