ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದೇ ಇದ್ದರೆ.. ಇದು ಬೈರತಿ ಬಸವರಾಜು ಶಪಥ

Krishnaveni K

ಬುಧವಾರ, 21 ಮೇ 2025 (17:29 IST)
ಬೆಂಗಳೂರು: ಮುಂದಿನ ಮಳೆಗಾಲದೊಳಗಾಗಿ ತಮ್ಮ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆ ಬಗೆಹರಿಯದೇ ಹೋದರೆ ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ.. ಇದು ಕೆಆರ್ ಪುರಂ ಶಾಸಕ ಬೈರತಿ ಬಸವರಾಜು ಶಪಥ.

ಕೆಆರ್ ಪುರಂ ಕ್ಷೇತ್ರದಲ್ಲಿ ಮಳೆಗಾಲದಲ್ಲಿ ಪ್ರತೀ ಬಾರಿ ಅತೀ ಹೆಚ್ಚು ಅನಾಹುತಗಳು ಸಂಭವಿಸುತ್ತವೆ. ವಿಶೇಷವಾಗಿ ಸಾಯಿ ಲೇಔಟ್ ನಲ್ಲಿ ಪ್ರತೀ ಬಾರಿಯೂ ಮಳೆಗೆ ಮನೆಗಳು ಮುಳುಗಿ ಹೋಗುತ್ತವೆ. ಕಳೆದ ವರ್ಷವೂ ಇದೇ ಸಮಸ್ಯೆ ಎದುರಾಗಿತ್ತು.

ಈ ಲೇಔಟ್ ಸಮಸ್ಯೆ ಕಳೆದ 12 ವರ್ಷಗಳಿಂದ ಇದೆ. ಈ ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಬೆಳಿಗ್ಗೆ 5 ಗಂಟೆಗೆ ಬಂದು ಜನರಿಗೆ ನೆರವಾಗಿದ್ದಾನೆ. ಸಿಎಂಗೂ ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನೆ. ಅವರು ಬಗೆಹರಿಸುವ ವಿಶ್ವಾಸವಿದೆ. ಒಂದು ವೇಳೆ ಮುಂದಿನ ಮಳೆಗಾಲದೊಳಗಾಗಿ ಸಮಸ್ಯೆ ಬಗೆಹರಿಸದೇ ಇದ್ದರೆ ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಬೈರತಿ ಬಸವರಾಜು ಹೇಳಿದ್ದಾರೆ.

ಇನ್ನು, ಕೆಆರ್ ಪುರಂ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡದ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಕೈ ಹಿಡಿದು ಎಳೆದುಕೊಂಡು ಬರಕ್ಕಾಗುತ್ತಾ? ಬರದೇ ಇದ್ದರೆ ನಾನು ಏನು ಮಾಡಲಿ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ