Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು
ಬೆಂಗಳೂರಿನಲ್ಲಿ ಸತತ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲಾಗದಷ್ಟು ನೀರು ತುಂಬಿಕೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ತೆಪ್ಪದಲ್ಲಿ ಕುಳಿತು ಬ್ರ್ಯಾಂಡ್ ಬೆಂಗಳೂರು ಬಾವುಟ ಹಿಡಿದುಕೊಂಡು ಸಂಚರಿಸುತ್ತಿರುವ ಫೋಟೋವೊಂದನ್ನು ಹಾಕಿ ಟ್ರೋಲ್ ಮಾಡಿದೆ. ನೋಡಿ ನಮ್ಮ ಡಿಕೆ ಸಾಹೇಬ್ರು ಬ್ಯ್ರಾಂಡ್ ಬೆಂಗಳೂರು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಢಿದೆ.
ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ರೀತಿ ತಮಾಷೆ ಮಾಡುವ ಬದಲು ನೀವು ಯಾಕೆ ವಿಪಕ್ಷವಾಗಿ ಒಳ್ಳೆಯ ಸಲಹೆ ನೀಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಸದ್ಯದಲ್ಲೇ ನಮ್ಮ ಮೆಟ್ರೋ ನೀರಿನಲ್ಲೂ ಆರಂಭವಾಗಲಿದೆ ಎಂದು ತಮಾಷೆ ಮಾಡಿದ್ದಾರೆ.