ಶಾಸಕ ಇಕ್ಬಾಲ್ ಹುಸೇನ್ ಖಾಸಗಿ ವಿಡಿಯೋ ವೈರಲ್: ಇಬ್ಬರ ಬಂಧನ

Sampriya

ಗುರುವಾರ, 9 ಮೇ 2024 (20:24 IST)
ರಾಮನಗರ:  ಶಾಸಕ ಇಕ್ಬಾಲ್ ಹುಸೇನ್ ಅವರು ಕಾಂಗ್ರೆಸ್ ಕಾರ್ಯಕರ್ತೆಯೊಂದಿಗಿನ ಖಾಸಗಿ ವಿಡಿಯೋ ವೈರಲ್ ಸಂಬಂಧ ಪೊಲೀಸರು  ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹಾರೋಹಳ್ಳಿ ತಾಲ್ಲೂಕು ಗಾಣಾಳುದೊಡ್ಡಿ ಗ್ರಾಮದ ನಿವಾಸಿ ಶೇಷಾದ್ರಿ, ಮಾಯಗಾನಹಳ್ಳಿ ನಿವಾಸಿ ಶಶಿಕುಮಾರ್ ಎಂದು ಗುರುತಿಸಲಾಗಿದೆ.

ಇನ್ನೂ ವೈರಲ್ ವಿಡಿಯೋ ಸಂಬಂಧ ಮಹಿಳೆ ಠಾಣೆಗೆ ದೂರು ನೀಡಿದ್ದರು. ನನ್ನದು ಇಕ್ಬಾಲ್ ಹುಸೇನ್ ನಡುವೆ ತಂದೆ ಮಗಳ ಸಂಬಂಧ. ವಿಡಿಯೋವನ್ನು ಎಡಿಟ್ ಮಾಡಿ ಹರಿಬಿಡಲಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ʻನನ್ನ ಹಾಗೂ ಇಕ್ಬಾಲ್ ಹುಸೇನ್ ಅವರದ್ದು ತಂದೆ-ಮಗಳ ಸಂಬಂಧ. ನನ್ನ ಅವರ ವಿಡಿಯೋ ಕರೆಯನ್ನು ದುರುಪಯೋಗ ಮಾಡಲಾಗಿದೆ. ವಿಡಿಯೋ ಒಳ ಉಡುಪಿನಲ್ಲಿ ಇರುವ ಹಾಗೇ ಸೃಷ್ಟಿಸಿ ತೇಜೋವಧೆ ಮಾಡಿದ್ದಾರೆ. ತಮ್ಮಣ್ಣಗೌಡ ಗುಂಡ್ಕಲ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ. ಶಾಸಕರು ಮತ್ತು ನಾನು ಮಾತನಾಡಿರುವುದನ್ನು ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕುʼʼ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ