ಚುನಾವಣಾ ಆಯೋಗದ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ಅಸಮಾಧಾನ
ಕಳೆದ ನಾಲ್ಕೈದು ತಿಂಗಳಿಂದ ಮತಪಟ್ಟಿ ಬಗ್ಗೆ ಗೊಂದಲ ಇದೆ ಎಂದು ಶಾಸಕ ರಿಜ್ವಾನ್ ಹೇಳಿದರು.ಈ ಬಗ್ಗೆ ಮಾತನಾಡಿದ ಅವರು ಶಿವಾಜಿನಗರ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಗೊಂದಲ ಇದೆ.ಚುನಾವಣಾ ಆಯೋಗ ತಮ್ಮ ಕೆಲಸವನ್ನ ಬೇರೆ ಸಂಸ್ಥೆಗಳ ಮೂಲಕ ಮಾಡ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಳೆದ ಒಂದು ವರ್ಷದಲ್ಲಿ ಯಾರು ಮತಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಯಾರ್ಯಾರು ಡಿಲೀಟ್ ಆಗಿದೆ ಅನ್ನೋದನ್ನ ನೋಡಿದ್ರು.ಇದಕ್ಕಾಗಿ ಒಂದು ಕ್ಷೇತ್ರಕ್ಕೆ ಒಬ್ಬ ಐಎಎಸ್ ಆಫೀಸರ್ ಗಳನ್ನ ನೇಮಿಸಿದ್ರು.ಈ ಮೂರು ಕ್ಷೇತ್ರಗಳ ಅಂತಿಮ ಮತಪಟ್ಟಿ ಜನವರಿ 15 ರಂದು ಮಾಡಿದ್ದಾರೆ. ಆದರೆ ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.ಅಂತಿಮ ಮತಪಟ್ಟಿ ಆದ ಮೇಲೆ ದೂರು ನೀಡಿದ್ರು.ದೂರಿನ ಆಧಾರದ ಮೇಲೆ 9195 ಮತದಾರರಿಗೆ ನೋಟಿಸ್ ಕೊಡಲಾಗಿತ್ತು.93 ಬೂತ್ ಗಳ ಮತದಾರರಿಗೆ ಮಾತ್ರ ನೋಟಿಸ್ ನೀಡಿದ್ರು.ನೋಟಿಸ್ ಗೆ ಯಾರು ಪ್ರತಿಕ್ರಿಯೆ ಕೊಡಲಿಲ್ವೋ ಅಂತವರದ್ದು ಡಿಲೀಟ್ ಮಾಡಿದ್ದಾರೆ.22 ಜನ ಹೈಕೋರ್ಟ್ ಗೆ ರಿಟ್ ಅರ್ಜಿ ಹಾಕಿದ್ದರು.ಅಲ್ಲಿ ಚುನಾವಣಾ ಆಯೋಗ ನಾವು 22 ಜನರದ್ದು ಮತವನ್ನ ಡಿಲೀಟ್ ಮಾಡಲ್ಲ ಎಂದು ಹೇಳಿದ್ದಾರೆ. ಆದರೆ 9195 ಮತದಾರರ ಪಟ್ಟಿಯಲ್ಲಿ 22 ಜನ ಕೋರ್ಟ್ ಗೆ ಹೋದ್ರು. ಉಳಿದವರೆಲ್ಲಾ ಕೋರ್ಟ್ ಗೆ ಹೋಗೋಕೆ ಆಗುತ್ತಾ..ಎಂದು ಚುನಾವಣಾ ಆಯೋಗದ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ಅಸಮಾಧಾನ ವ್ಯಕ್ತ ಪಡಿಸಿದ್ರು.