ಆ ಶಾಸಕ ಭೇಟಿ ನೀಡಿದ್ದೆಲ್ಲಿ ಗೊತ್ತಾ?

ಬುಧವಾರ, 26 ಡಿಸೆಂಬರ್ 2018 (15:48 IST)
ಕಳೆದ ಮೂರು ದಿನಗಳ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಮೃತ ಪಟ್ಟವರ ಮನೆಗಳಿಗೆ ಔರಾದ್ ಶಾಸಕ ಭೇಟಿ ನೀಡಿದರು.
ಶಾಸಕ ಪ್ರಭು ಚೌಹಾಣ್ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಬೀದರ್ ನಾಂದೇಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಬೋರಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಅಂಗಡಿಗಳಿಗೆ ನುಗ್ಗಿದ್ದು, ಸ್ಥಳದಲ್ಲಿ ಇದ್ದ ನಾಲ್ವರು ಅಮಾಯಕರು ಸಾವನ್ನಪ್ಪಿದ್ದರು.

ಬೋರಾಳ್ ಗ್ರಾಮದ ನಿವಾಸಿ ಧನರಾಜ್, ಸಂಜುಕುಮಾರ್, ಕಪ್ಪೆಕೆರೆ ರಮೇಶ್ ನಿವಾಸಿ ಸೇರಿದಂತೆ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ಔರಾದ್ ಶಾಸಕ ಪ್ರಭು ಚೌಹಾಣ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ, ಮೃತರ ಕುಟುಂಬಕ್ಕೆ ತಲಾ 10 ಸಾವಿರ ನೀಡಿ, ಸರ್ಕಾರದ ಸೌಲಭ್ಯಗಳು ಒದಗಿಸುವುದಾಗಿ ಭರವಸೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ