ಗ್ರಾಮ ಲೆಕ್ಕಾಧಿಕಾರಿಯ ಮೇಲೆ ಲಾರಿ ಹರಿಸಿರುವ ಪ್ರಕರಣ; ಕಾಂಗ್ರೆಸ್ ಶಾಸಕನಿಂದ ವಿವಾದಾತ್ಮಕ ಹೇಳಿಕೆ
ಬುಧವಾರ, 26 ಡಿಸೆಂಬರ್ 2018 (06:40 IST)
ರಾಯಚೂರು : ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೇಲೆ ದಂಧೆಕೋರರು ಲಾರಿ ಹರಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ದುರ್ಗಪ್ಪ ಎಸ್. ಹೂಲಗೇರಿ, ‘ಗ್ರಾಮಲೆಕ್ಕಾಧಿಕಾರಿಯ ಹತ್ಯೆಯಲ್ಲ ಅದು ಅಸಹಜ ಸಾವಾಗಿದ್ದು, ಅವರು ಕಾಲು ಜಾರಿ ಮೃತಪಟ್ಟಿದ್ದಾರೆಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವಾಗ ತಡೆಯಲು ಹೋದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚೀಕಪರ್ವಿಯ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೇಲೆ ದಂಧೆಕೋರರು ಲಾರಿ ಹರಿಸಿರುವ ಕಾರಣ ಅವರ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ದುರ್ಗಪ್ಪ ಎಸ್. ಹೂಲಗೇರಿ, ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರದ್ದು ಅಸಹಜ ಸಾವು ಎನ್ನುವ ಮಾಹಿತಿಯಿದೆ. ಮರಳು ಲಾರಿ ತಡೆಯಲು ಹೋದಾಗ ಲಾರಿ ಮುಂದಕ್ಕೆ ಹೋಗಿದೆ. ಈ ವೇಳೆ ಕಾಲು ಜಾರಿ ಹಿಂದಿನ ಗಾಲಿಗೆ ಬಿದ್ದು ಅಧಿಕಾರಿ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.
ಶಾಸಕರ ಹೇಳಿಕೆಯ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಶಾಸಕರು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ