ಜೋಡೆತ್ತಿನ ಬಂಡಿ ಓಡಿಸಿದ ಶಾಸಕ

ಶನಿವಾರ, 15 ಫೆಬ್ರವರಿ 2020 (18:30 IST)
ಜೋಡೆತ್ತಿನ ಬಂಡಿ ಓಡಿಸಿ ಶಾಸಕ ನೆಹರು ಗಮನ ಸೆಳೆದಿದ್ದಾರೆ.

ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಜಾತ್ರೆಯ ಕಲಾಜಾಥಾ ನೋಡುಗರ ಗಮನ ಸೆಳೆಯಿತು. ಮುರುಘಾಮಠದ ಆವರಣದಲ್ಲಿ ಕಲಾಜಾಥಾಕ್ಕೆ ಚಾಲನೆ ನೀಡಿದ್ರು ಶಾಸಕ ನೆಹರು ಓಲೇಕಾರ. ಜೋಡೆತ್ತಿನ ಬಂಡಿ ಓಡಿಸುವುದರ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಜಾನಪದ ಜಾತ್ರೆಯ ಮೆರವಣಿಗೆಯಲ್ಲಿ 18ಕ್ಕೂ ಹೆಚ್ಚು ಕಲಾ ತಂಡಗಳು, ಯುವಕ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ದೇಶಿ ಪರಂಪರೆಯ ವೈಭವ ಸಾರಿದರು.

ಪಾರಂಪರಿಕ ಕಹಳೆ ವಾದ್ಯಗಳನ್ನು ಊದುವುದರೊಂದಿಗೆ ಆರಂಭಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯುದ್ಧಕ್ಕೂ ವೈವಿಧ್ಯಮಯ ದೇಶಿ ವಾದ್ಯಗಳ ನಿನಾದಾ, ಜನಪದ ಕುಣಿತಗಳು, ಕೋಲಾಟ, ಡೊಳ್ಳು ಕುಣಿತ, ಕರಡಿಮಜಲು, ಹೆಜ್ಜೆಮೇಳ, ನಂದಿಕೋಲು ಕುಣಿತ, ನವಿಲು ಕುಣಿತ, ಜಗ್ಗಲಿಗೆ, ನಗಾರಿ ಹೀಗೆ ಹಲವು ಬಗೆಯ ಗ್ರಾಮೀಣ ಸೊಗಡಿನ ಕಲೆಗಳ ಅನಾವರಣ ನೋಡುಗರಿಗೆ ರೋಮಾಂಚನಗೊಳಿಸಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ