ದಾಖಲೆ ಪ್ರಮಾಣದಲ್ಲಿ ಕಬ್ಬು ಅರೆಯುತ್ತಿರೋ ಸಕ್ಕರೆ ಕಾರ್ಖಾನೆ

ಶನಿವಾರ, 15 ಫೆಬ್ರವರಿ 2020 (18:12 IST)
ರೈತರ ಜೀವನಾಡಿಯಾಗಿರೋ ಸಕ್ಕರೆ ಕಾರ್ಖಾನೆಯೊಂದು ಈ ಬಾರಿಯೂ ದಾಖಲೆ ಪ್ರಮಾಣದಲ್ಲಿ ಕಬ್ಬು ಅರೆಯುತ್ತಿದೆ.

ಮಂಡ್ಯದ  ಮಾಕವಳ್ಳಿಯಲ್ಲಿರುವ ರೈತರ ಜೀವನಾಡಿಯಾದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು 7.5ಲಕ್ಷ ಟನ್ ಕಬ್ಬನ್ನು ಅರೆದಿದ್ದು, ಮಾರ್ಚ್ ಅಂತ್ಯದ ವೇಳೆಗೆ 9 ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಸರ ಸ್ನೇಹಿಯಾಗಿರುವ ಸಕ್ಕರೆ ಕಾರ್ಖಾನೆಯು ದಾಖಲೆ ಪ್ರಮಾಣದಲ್ಲಿ ಕಬ್ಬು ನುರಿಸುತ್ತಿದೆ.

ಕಾರ್ಖಾನೆಯು ದಿನವಹಿ 4 ಸಾವಿರ ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯ ಹೊಂದಿದೆ. ನಿತ್ಯ 20 ಮೆಗಾವ್ಯಾಟ್ ಗೂ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ