ರಾಜ್ಯ ಸುತ್ತಿ ರೈತರ ಕಣ್ಣೀರು ಒರೆಸುವೆ ಎಂದ ಸಚಿವ
ರಾಜ್ಯದ ಉದ್ದಗಲಕ್ಕೂ ಸಂಚರಿಸುವುದರೊಂದಿಗೆ ಒಬ್ಬ ರೈತನ ಮಗನಾಗಿ ಕೆಲಸ ಮಾಡುವೆ.
ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸ್ವ ಕ್ಷೇತ್ರ ಹಿರೇಕೆರೂರಿಗೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ಕೃಷಿ ಇಲಾಖೆಯಲ್ಲಿ ಹಲವಾರು ಸವಾಲುಗಳೊಂದಿಗೆ ಅನೇಕ ಬೇಡಿಕೆಗಳಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತ ಮುಂಖಡರ ಸಭೆ ಕರೆದು ಅವರ ಸಮಸ್ಯೆ ಆಲಿಸಿದ್ದಾರೆ. ಬಜೆಟ್ ನಲ್ಲಿ ರೈತರ ಪರವಾಗಿ ಯೋಜನೆ ರೂಪಿಸಲು ಚಿಂತನೆ ನಡೆಸಿದ್ದಾರೆ ಎಂದರು.
ಕೃಷಿ ಸಮ್ಮಾನ್ ಯೋಜನೆಯಲ್ಲಿ ಅನೇಕ ರೈತರ ಹೆಸರುಗಳು ಕೈಬಿಟ್ಟು ಹೋಗಿದ್ದನ್ನು ಮುಂದಿನ 10 ದಿನಗಳಲ್ಲಿ ಸರಿ ಪಡಿಸಲಾಗ್ತದೆ. 1.5 ಲಕ್ಷ ಜನ ರೈತರಿಗೆ ಯೋಜನೆ ತಲುಪುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.