ಮೊಬೈಲ್ ಹುಚ್ಚು : ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ!
ಪ್ರಥಮ ಪಿಯುಸಿ ಓದುತ್ತಿದ್ದ ನಾಗರಾಜ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೊಬೈಲ್ ಕೊಡಿಸಿಲ್ಲವೆಂದು ಫೆ.16 ರಂದು ಮನೆ ಬಿಟ್ಟು ಹೋಗಿದ್ದ.
ಅವನು ಸನ್ನಿಧಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಿದ್ಯಾರ್ಥಿಯ ಶವವು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕೊಟ್ಟೂರು ಕೆರೆಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿಯು ಓದಿಗಾಗಿ ಮೊಬೈಲ್ ಕೊಡಿಸುವಂತೆ ಪೋಷಕರ ಬಳಿ ಹಟ ಹಿಡಿದಿದ್ದ. ಆದರೆ ಮನೆಯಲ್ಲಿ ಮೊಬೈಲ್ ಕೊಡಿಸದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.