ಅಭಿಮಾನಿಗಾಗಿ ರಸ್ತೆಗೆ ಇಳಿದು ಬಂದ ಮೋದಿ

ಮಂಗಳವಾರ, 11 ಅಕ್ಟೋಬರ್ 2022 (14:57 IST)
ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜ್ಯ ಗುಜರಾತ್​​ಗೆ ನಿನ್ನೆ ತೆರಳಿದ್ರು. ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ ಬೃಹತ್ ಡ್ರಗ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ರು. ನಂತರ ಅವರು ಅಲ್ಲಿನ ಕಾರಿನಲ್ಲಿ ತೆರಳಿದ್ರು. ಈ ಸಂದರ್ಭದಲ್ಲಿ ಮೋದಿಗಾಗಿ ಅಭಿಮಾನಿಯೋರ್ವ ರಸ್ತೆಯಲ್ಲಿ ನಿಂತಿದ್ರು. ಇದನ್ನು ಗಮನಿಸಿದ ನರೇಂದ್ರ ಮೋದಿ ಕಾರಿನಿಂದ ಇಳಿದು ಅಭಿಮಾನಿಯನ್ನು ಕೈ  ಮುಗಿದು ಸ್ವಾಗತಿಸಿ ಆಟೋಗ್ರಾಫ್​​​ ನೀಡಿದ್ರು. ದೇಶದ ಪ್ರಧಾನಿಯಾಗಿದ್ರು ಸಹ ಸಾಮಾನ್ಯರಂತೆ ರಸ್ತೆಗೆ ಇಳಿದು ಬಂದಿದ್ದು, ಮೋದಿಯ ಸರಳ ವ್ಯಕ್ತಿತ್ವದ ಅನಾವರಣವಾಗಿತ್ತು. ಮೋದಿ ಅಭಿಮಾನಿ ಮೋದಿ ತಮ್ಮ ತಾಯಿಯೊಂದಿಗೆ ಇರುವ, ತಾಯಿಗೆ ನಮಸ್ಕರಿಸುವ ಫೋಟೋ ಹಿಡಿದು ನಿಂತಿದ್ದು, ಆ ಫೋಟೋ ಮೇಲೆ ತಮ್ಮ ಹಸ್ತಾಕ್ಷರ ಬರೆದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ