ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ತಿದ್ದಾರೆ : ಬಿ.ಕೆ ಹರಿಪ್ರಸಾದ್

ಭಾನುವಾರ, 26 ಮಾರ್ಚ್ 2023 (11:31 IST)
ಮಂಗಳೂರು : 56 ಇಂಚು ಎದೆಯ ನರೇಂದ್ರ ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಮೇಲೆ ತೆಗೆದುಕೊಂಡ ಕ್ರಮವನ್ನು ಕಾನೂನು, ರಾಜಕೀಯವಾಗಿ ಹೋರಾಟ ಮಾಡುತ್ತೇವೆ.
 
ಕೋರ್ಟ್ ನಲ್ಲಿ ನ್ಯಾಯದೇವತೆ ಕಣ್ಣಿಗೆ ಕಟ್ಟಿಕೊಂಡಿರುವ ಕಪ್ಪುಪಟ್ಟಿ ಬಿಚ್ಚಿಕೊಂಡಿದೆ. ಈ ಬೆಳವಣಿಗೆ ತಾಪತ್ರಯ ಆಗುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವ ವಿಚಾರ ಸಂಬಂಧ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಳ್ಳರನ್ನು ಕಳ್ಳ ಎಂದು ಹೇಳುವುದು ತಪ್ಪು ಎಂಬ ಭಾವನೆ ಬಿಜೆಪಿಯಲ್ಲಿದೆ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವದ ಎಲ್ಲಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಲಾಗಿದೆ. ರಾಹುಲ್ ಗಾಂಧಿಯವರ ಬಗ್ಗೆ ನರೇಂದ್ರ ಮೋದಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತೆ. ರಾಹುಲ್ ಗಾಂಧಿ ಅನರ್ಹಗೊಳಿಸಿದ ಪ್ರಕ್ರಿಯೆ ಪ್ರಶ್ನಾರ್ಹ. ನರಮೇಧ, ಕೈ, ಕಾಲು ಕತ್ತರಿಸಬೇಕು ಎಂದು ಹೇಳುವವರನ್ನು ಪಾಕಿಸ್ತಾನ ಕ್ಕೆ ಓಡಿಸುತ್ತೇವೆ ಎಂದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ