ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದಿಂದ ದೇಶದ ಪ್ರಧಾನಿಯಾಗುವವರೆಗಿನ ಪ್ರಯಾಣವು ಕಷ್ಟಗಳು ಮತ್ತು ಕಠಿಣ ಪರಿಶ್ರಮದಿಂದ ಕೂಡಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಮೋದಿ ಅವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮೋದಿ @20 ಡ್ರೀಮ್ಸ್ ಮೀಟ್ ಡೆಲಿವರಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ವೇಳೆ ಅವರು, ರೂಪಾ ಪಬ್ಲಿಕೇಷನ್ ತಂದಿರುವ ಮೋದಿ @20 ಡ್ರೀಮ್ಸ್ ಮೀಟ್ ಡೆಲಿವರಿ ಪುಸ್ತಕವನ್ನು ಅಧ್ಯಯನ ಮಾಡುವ ಮೂಲಕ, ಮೋದಿ ಅವರು ರಾಷ್ಟ್ರದ ಏಕತೆ-ಸಮಗ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ.
ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಜನರ ಚಿಂತನೆಯಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದರು.
ಧಾರ್ಮಿಕ, ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚಿಂತನೆಯ ವ್ಯಕ್ತಿ. ಆತ್ಮಸಾಕ್ಷಿಯ, ಪ್ರಾಮಾಣಿಕ, ಅಸಾಧಾರಣ ವಾಕ್ಚಾತುರ್ಯ ಹೊಂದಿರುವ, ಸಾಮರಸ್ಯ ವ್ಯಕ್ತಿತ್ವ, ಶಿಸ್ತಿನ ಜೀವನ, ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ,
ದೂರದೃಷ್ಟಿ, ಸಮರ್ಥ ನಾಯಕತ್ವ, ನಮ್ರತೆ ಮತ್ತು ಹೋರಾಟ, ಸಕಾರಾತ್ಮಕತೆ ಮತ್ತು ಧೈರ್ಯದ ಸಂಕೇತವಾಗಿರುವ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಯಲ್ಲಿ ಭಾರತದ ಗುರುತನ್ನು ಶಕ್ತಿಯುತ ದೇಶವಾಗಿ ಮಾಡಿದವರು ಎಂದು ಪ್ರಶಂಸಿಸಿದರು.