ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯುತ್ತಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಸ್ನೇಹಿತರು ಇದೀಗ ಹೊರಬರಲು ದಾರಿ ಹುಡುಕುತ್ತಿದ್ದಾರೆ.
ನಿನ್ನೆ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪನ್ನು ಎರಡು ದಿನ ಮುಂದೂಡಿದೆ. ಇದರಿಂದಾಗಿ ನಿನ್ನೆ ಬಿಡುಗಡೆಯ ಬಾಗಿಲು ತೆರೆಯುತ್ತದಾ ಎಂದು ಕಾದು ಕುಳಿತಿದ್ದ ನಲಪಾಡ್ ಮತ್ತು ಸ್ನೇಹಿತರು ಮತ್ತೆ ನಾಳೆಯ ತೀರ್ಪಿಗಾಗಿ ಕಾದು ಕೂರುವಂತಾಗಿದೆ.
ಅತ್ತ ನಲಪಾಡ್ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಮಂಜುನಾಥ್ ಮರಳಿ ಸೇವೆಗೆ ಹಾಜರಾಗುವಂತೆ ಗೃಹ ಸಚಿವರೇ ಸೂಚಿಸಿರುವುದು ಕೊಂಚ ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ