ನಾಲ್ಕು ದಿನ ಲಸಿಕೆ ವಿತರಣೆಗೆ ನೋ ಪ್ರಾಬ್ಲಂ

ಮಂಗಳವಾರ, 4 ಮೇ 2021 (09:09 IST)
ಬೆಂಗಳೂರು: ಕೊರೋನಾ ಲಸಿಕೆಯ ಕೊರತೆ ಎದುರಿಸುತ್ತಿದ್ದ ರಾಜ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. 5 ಲಕ್ಷ ಡೋಸ್ ಲಸಿಕೆ ಬಂದಿದ್ದು, ಇನ್ನು ನಾಲ್ಕು ದಿನ ಲಸಿಕೆ ವಿತರಣೆ ನಿರಾತಂಕವಾಗಿ ನಡೆಯಲಿದೆ.


18 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ವಿತರಿಸಲು ಮುಂದಾದ ಬಳಿಕ ರಾಜ್ಯಕ್ಕೆ ಎಲ್ಲರಿಗೂ ಲಸಿಕೆ ಪೂರೈಸುವುದು ತಲೆನೋವಾಗಿತ್ತು. ಇದೀಗ ಪುಣೆಯಿಂದ 5 ಲಕ್ಷ ಕೊವಿಶೀಲ್ಡ್ ಲಸಿಕೆ ಬಂದಿದೆ.

ಆದರೆ ಈ ಲಸಿಕೆಗಳನ್ನು ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಿತರಿಸಲು ಸೂಚಿಸಲಾಗಿದೆ. ಸದ್ಯಕ್ಕೆ ಸೋಂಕು ಹೆಚ್ಚಿರುವ ಜಿಲ್ಲೆಗಳ ಆದ್ಯತೆ ಮೇರೆಗೆ ಲಸಿಕೆ ವಿತರಿಸಲಾಗುತ್ತಿದೆ. ಮುಂದಿನ ಎರಡು ತಿಂಗಲು ಲಸಿಕೆ ಕೊರತೆಯಾಗಲಿದೆ ಎಂದು ಸೀರಂ ಸಂಸ್ಥೆ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ