ರಾಜ್ಯಕ್ಕೆ ಕರೆತರಗಿಲಾಗಿದ್ಯಂತೆ 60 ಕ್ಕೂ ಹೆಚ್ಚು ಹೆಲಿಕಾಪ್ಟರ್

ಬುಧವಾರ, 19 ಏಪ್ರಿಲ್ 2023 (20:00 IST)
ಕರ್ನಾಟಕದಲ್ಲಿ  ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ..ಕೇಂದ್ರದ ನಾಯಕರು ಕೂಡ ಒಬ್ಬೊಬ್ಬರಾಗಿ ರಾಜ್ಯಕ್ಕೆ ಆಗಮಿಸುತ್ತಾ ಇದ್ದಾರೆ, ಚುನಾವಣೆಯ ಪ್ರಚಾರ ಜೋರಾಗ್ತಿದ್ದಂತೆ ಇತ್ತ ರಾಜ್ಯದಲ್ಲಿ ಹೆಲಿಕಾಪ್ಟರ್, ಐಷಾರಾಮಿ ಕರುಗಳ ಬೇಡಿಕೆ ಜೋರಾಗಿದೆ.ಸದ್ಯ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಪ್ರಮುಖ  ರಾಷ್ಟ್ರೀಯ ಹಾಗೂ ಅನ್ಯ ರಾಜ್ಯಗಳ ನಾಯಕರು ಚುನಾವಣಾ ಪ್ರಚಾರಕ್ಕೆ ದಾಂಗುಡಿ ಇಡುತ್ತಿದ್ದಾರೆ,ಇದ್ರಿಂದಾಗಿ ರಾಜ್ಯದಲ್ಲಿ ಹೆಲಿಕಾಪ್ಟರ್‌, ಮಿನಿ ಹೆಲಿ ಕಾಪ್ಟರ್ ಹಾಗೂ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪ್ರಮುಖ ಪಕ್ಷಗಳ ಘಟಾನುಘಟಿಗಳು ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮಾಡಲು ಹೆಲಿಕಾಪ್ಟರ್‌ ಮತ್ತಿತರ ವಾಹನಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಕೆಲವು ನಾಯಕರು ಚುನಾವಣೆ ಮುಗಿಯುವವರೆಗೆ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಫ್ಟ್‌ಗಳನ್ನು ಮುಂಗಡ ಕಾಯ್ದಿರಿಸಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳ ಏರ್‌ಲೈನ್ಸ್‌ ಸಂಸ್ಥೆಗಳ ಮೂಲಕ ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಆಯಕಟ್ಟಿನ ನಗರಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಇರಿಸಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಿದ್ದಾರೆ.

ಹಾಗಿದ್ರೆ ಪ್ರತಿ ಗಂಟೆಗೆ ಹೆಲಿಕಾಪ್ಟರ್ ನ ಬಾಡಿಗೆ ಎಷ್ಟು ಗೊತ್ತಾ?
 
2 ಆಸನದ ಕಾಪ್ಟರ್‌: .2.10 ಲಕ್ಷ
4 ಆಸನದ ಕಾಪ್ಟರ್‌: .2.30 ಲಕ್ಷ
6 ಆಸನದ ಮಿನಿ ವಿಮಾನ: .2.60 ಲಕ್ಷ
8 ಆಸನದ ಮಿನಿ ವಿಮಾನ: .3.50 ಲಕ್ಷ
13 ಆಸನದ ಮಿನಿವಿಮಾನ: .4 ಲಕ್ಷ
15 ಆಸನದ ಮಿನಿ ವಿಮಾನ: .5 ಲಕ್ಷ

ಇನ್ನೂ ಗಣ್ಯರು ಹೆಲಿಪ್ಯಾಡ್‌ನಿಂದ ನಿಗದಿತ ಸ್ಥಳಕ್ಕೆ ಪ್ರಯಾಣಿಸಲು ಐಷಾರಾಮಿ ಕಾರುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೀಗಾಗಿ ವಿಮಾನಯಾನ ಕಂಪನಿಗಳು ಹೆಲಿಕಾಪ್ಟರ್‌ ಜತೆಗೆ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುತ್ತಿದೆ. ಈ ಬಾರಿ ಅಭ್ಯರ್ಥಿಗಳಿಗೆ 10 ಲಕ್ಷ ರು.ಗಳನ್ನು ಮಾತ್ರ ಪ್ರಯಾಣ ಭತ್ಯೆಯನ್ನಾಗಿ ವೆಚ್ಚ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ. ಹೀಗಾಗಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳಿಂದ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯದೆ, ಬೇರೆಯವರ ಮೂಲಕ ಕಾರುಗಳನ್ನು ಬಾಡಿಗೆಗೆ ಪಡೆದು, ಹಣ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ